Wednesday, January 22, 2025

ರಾಕಿಂಗ್ ಜೋಡಿ ಸ್ಟೈಲ್​ಗೆ ಪ್ಯಾನ್ ಇಂಡಿಯಾ ಫಿದಾ..!

ಕೆಜಿಎಫ್​ ನಂತ್ರ ರಾಕಿಭಾಯ್ ಯಶ್ ಏನೇ ಮಾಡಿದ್ರೂ ಟ್ರೆಂಡ್. ಅವ್ರ ಯುನಿಕ್ ಸ್ವ್ಯಾಗ್​ನ ಎಲ್ರೂ ಫಾಲೋ ಮಾಡುವಂತಾಗಿದೆ. ಇತ್ತೀಚೆಗೆ ಸೈಮಾದಲ್ಲಿ ಸ್ಯಾಂಡಲ್​ವುಡ್ ಸಿಂಡ್ರೆಲಾ ಜೊತೆ ರಾಕಿಂಗ್ ಹೆಜ್ಜೆ ಹಾಕಿದ ಭಾಯಿಜಾನ್, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಅದೇನು ಅನ್ನೋದ್ರ ಜೊತೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್​ವುಡ್ ಅಪ್ಡೇಟ್ಸ್ ಕೊಡ್ತೀವಿ. ನೀವೇ ಓದಿ.

  • ದೇಸಿ ಉಡುಗೆಯಲ್ಲಿ ಮಿರ ಮಿರ ಮಿಂಚಿದ ಭಾಯಿಜಾನ್

ಸಾವಿರ ಕೋಟಿಯ ಸರದಾರನಾಗಿ ಬಾಕ್ಸ್​​ ಆಫೀಸ್​​ ​ದಾಖಲೆಗಳನ್ನ ಪುಡಿ ಪುಡಿ ಮಾಡಿದ ನಟ ರಾಕಿಭಾಯ್​​​. ಕೆಜಿಎಫ್​​ ನಂತ್ರ ಸ್ಯಾಂಡಲ್​​ವುಡ್​​​ನ ಚಹರೆಯನ್ನೆ ಬದಲು ಮಾಡಿದ ಸುಲ್ತಾನ. ದುಬೈ, ಮಲೇಷಿಯಾದಂತಹ ದೊಡ್ಡ ದೊಡ್ಡ ನಗರಗಳಲ್ಲಿ ನಡಿತಿದ್ದ ಸೈಮಾ ಅವಾರ್ಡ್​​​ ಸಮಾರಂಭಗಳು ಇಂದು ಸಿಲಿಕಾನ್​​ ಸಿಟಿಗೆ ಬರ್ತಿವೆ. ಇದಕ್ಕೆಲ್ಲಾ ರಾಕಿಭಾಯ್​ ಸೆಟ್​​​ ಮಾಡಿರೋ ಟ್ರೆಂಡ್​​ ಕಾರಣ ಎನ್ನಲಾಗ್ತಿದೆ. ಅದೇನೆ ಇರಲಿ, ರಾಮಾಚಾರಿ ಜೋಡಿಯ ಸೈಮಾ ದೇಸಿ ಲುಕ್​​ ಸಖತ್​ ವೈರಲ್​ ಆಗಿದೆ.

ಸೌತ್​​ ಸಿನಿದುನಿಯಾದ ಸೂಪರ್​ ಸ್ಟಾರ್​​ಗಳ ಸಂಗಮದಲ್ಲಿ ಮಿಂದೆದ್ದ ಸೈಮಾ ಅದ್ಧೂರಿಯಾಗಿ ನಡೆಯಿತು. ಎಲ್ರೂ ಕಲರ್​​ಫುಲ್​ ಅಟ್ರಾಕ್ಟಿವ್​​​ ಲುಕ್​ನಲ್ಲಿ ಮಿಂಚಿದ್ರು. ಇದೇ ವೇಳೆ ರಾಮಾಚಾರಿ ಜೋಡಿ ದೇಸಿ ಲುಕ್​​​ನಲ್ಲಿ ಎಂಟ್ರಿ ಕೊಟ್ಟು ಸರ್​​ಪ್ರೈಸ್​​ ಕೊಟ್ಟಿತ್ತು. ಇದೀಗ ಇದೇ ಕಾಸ್ಟ್ಯೂಮ್ಸ್​​ನಲ್ಲಿ ರಾಕಿಂಗ್​ ಜೋಡಿ ಫೋಟೊಶೂಟ್​ ಮಾಡಿಸಿದ್ದು ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡಿಂಗ್​ ಸೆಟ್​ ಮಾಡಿದೆ.

ಪ್ರೀತಿಸಿ ಮದ್ವೆಯಾದ ಮುದ್ದು ಜೋಡಿ ಇದು. ರಾಜಾಹುಲಿ ಸಿನಿಮಾಗಳಲ್ಲಿ ಆ್ಯಕ್ಟಿವ್​​ ಆಗಿ ಸಿನಿ ಇಂಡಸ್ಟ್ರಿ ರೂಲ್​ ಮಾಡ್ತಿದ್ರೆ, ರಾಧಿಕಾ ಮಕ್ಕಳ ಹಾರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸೈಮಾ ಸಮಾರಂಭಕ್ಕೆ ಸ್ಯಾರಿ ತೊಟ್ಟು ರಾಧಿಕಾ ಮಿಂಚಿದ್ರೆ, ರಾಕಿಭಾಯ್​​ ವೈಟ್​ ಅಂಡ್​​ ವೈಟ್​​​ನಲ್ಲಿ ದೇಸಿ ತೊಡುಗೆಯಲ್ಲಿ ಎಲ್ಲರ ಗಮನ ಸೆಳೆದ್ರು. ಅಂತೂ ಎಲ್ಲರ ಚಿತ್ತ ರಾಕಿಂಗ್​ ಜೋಡಿಯತ್ತ ನೆಟ್ಟಿತ್ತು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ ,ಪವರ್ ಟಿವಿ

RELATED ARTICLES

Related Articles

TRENDING ARTICLES