Monday, December 23, 2024

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಶಾಕ್

ಬೆಂಗಳೂರು : ಜನಸಾಮಾನ್ಯರು ತಿನ್ನುವ ಆಹಾರವೂ ಬಲು ದುಬಾರಿಯಾಗಿದ್ದು, ಇನ್ನೆರಡು ತಿಂಗಳಿನಲ್ಲಿ ರೈಸ್ ರೇಟ್ ಮತ್ತೆ ಶೇ.20ರಷ್ಟುಏರಿಕೆ ಸಾಧ್ಯತೆ ಇದೆ.

ನಗರದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮೊತ್ತೊಂದು ಶಾಕ್ ನೀಡಿದ್ದು, ಈಗಾಗಲೇ ಅಕ್ಕಿ 10 % ಏರಿಕೆ, ಮತ್ತಷ್ಟು ಅಕ್ಕಿ ದರ ಹೆಚ್ಚಾಗಲಿದೆ. ದುಬಾರಿ ದುನಿಯಾದಲ್ಲಿ ಜನಸಾಮಾನ್ಯರು ಬದುಕೋದೇಗಪ್ಪಾ? ವರುಣಾರ್ಭಟ, ವಿದೇಶಕ್ಕೆ‌ ರಫ್ತಿಗೆ ಅಕ್ಕಿ ದರ ಏರಿಕೆ, ಕಳೆದೆರಡು ವಾರದಿಂದ ಅಕ್ಕಿ ಸರಬರಾಜು ಕಡಿಮೆಯಾಗಿದೆ. ಕಳೆದೊಂದು ವಾರದಿಂದ ಗಣನೀಯವಾಗಿ ಅಕ್ಕಿ ದರ‌ ಏರಿಕೆಯಾಗಿದೆ.

ದರ ಏರಿಕೆ ಕಾರಣವೇನು?

ರಾಜ್ಯಾದ್ಯಂತ ವರುಣಾರ್ಭ, ಮಳೆಗೆ ನೆಲ್ಲು (ಅಕ್ಕಿ) ಬೆಳೆ ನೀರು ಪಾಲು ನವೆಂಬರ್ ಬರುವ ಭತ್ತ (ಅಕ್ಕಿ) ನಿರೀಕ್ಷೆಯಷ್ಟು ಬರಲ್ಲ, ಬೇಡಿಕೆಯಷ್ಟು ಅಕ್ಕಿ ಬಾರದ ಕಾರಣ. ಏಷ್ಯಾ ದೇಶಗಳಿಗೆ ಬೇಡಿಕೆಯಷ್ಟು ಅಕ್ಕಿ ರಫ್ತು. ಬಾಂಗ್ಲಾದೇಶ ಆಮದು ಸುಂಕ ಇಳಿಕೆ. ಶ್ರೀಲಂಕಾ ದೇಶಕ್ಕೆ ಅಕ್ಕಿ ರಫ್ತು.

APMC ಸಗಟು ದರ

ಅಕ್ಕಿ ಹಳೆ ದರ ಮತ್ತು ಹೊಸ ದರ – ಒಂದು‌ ಕೇಜಿ
ಸೋನಾ ಮಸೂರಿ (ಹೊಸತು) 38 ರೂ., 46 ರೂ.
ಸೋನಾ ಮಸೂರಿ (ಹಳೆಯದು) 46 ರೂ., 50 ರೂ.
ದಪ್ಪ ಅಕ್ಕಿ 27 ರೂ., 30 ರೂ.
ಅಕ್ಕಿ ವಿಧ; ಜುಲೈ ದರ; ಈಗಿನ ದರ
ಸ್ಟೀಮ್‌ ರೈಸ್‌; 36-38 ರೂ.; 48 ರೂ.ಗೆ
ಚಿಲ್ಲರೆ ದರದಲ್ಲಿ ಅಕ್ಕಿ ದರ ಏರಿಕೆ
ಅಕ್ಕಿ ವಿಧ; ಜುಲೈ ದರ; ಈಗಿನ ದರ
ಸೋನಾ ಮಸೂರಿ; 52 ರೂ.; 58-60 ರೂ.
ದೋಸೆ ಅಕ್ಕಿ 30 ರೂ.; 34 ರೂ.
ಜೀರಾ ರೈಸ್‌ 110 ರೂ.; 120 ರೂ.ಗೆ
ಅಕ್ಕಿಯ ವಿಧ – ಹಿಂದಿನ ದರ 26KG – ಹೊಸ ದರ 26KG
ಪರಿಮಳ ರೈಸ್ – 1250 ರೂ – 1,450 ರೂ,
ಕಲ್ಕಿ ರೈಸ್ – 1350 ರೂ – 1500 ರೂ,
ಕೋಲಂ ರೈಸ್ – 1450 ರೂ – 1,700 ರೂ,
ಬುಲೆಟ್ ರೈಸ್ – 1820 ರೂ – 2000 ರೂ,
ಕೇಸರ್ ಕಲಿ ರೈಸ್ – 1920 ರೂ – 2,200 ರೂ

RELATED ARTICLES

Related Articles

TRENDING ARTICLES