Monday, December 23, 2024

ಸಿಲಿಕಾನ್ ಸಿಟಿಯಲ್ಲಿ ಮಳೆಯಿಂದ ಸೈಡ್ ಎಫೆಕ್ಟ್..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರದಿಂದ ಪೋಷಕರಲ್ಲಿ ಆತಂಕ ಶುರುವಾಗಿದೆ. ಸರ್ಜಾಪುರ, ಬೆಳ್ಳಂದೂರು, ಮಾರತಹಳ್ಳಿ ಮಹದೇವಪುರದ ಭಾಗ ಮಳೆಗೆ ಜಲಾವೃತಗೊಂಡಿತ್ತು. ಈಗ ಇದೇ ಭಾಗದ ಜನರಿಗೆ ಈಗ ಹೊಸ ತಲೆಬಿಸಿ ಶುರುವಾಗಿದ್ದು, ಮಕ್ಕಳ ಆರೋಗ್ಯದಲ್ಲಿ ನಾನಾ ಆರೋಗ್ಯದ ಸಮಸ್ಯೆ ಕಂಡು ಬರ್ತಿದೆ.‌ ಕಲುಷಿತ ನೀರು ಸೇವನೆಯಿಂದ ಮಕ್ಕಳು ಅನಾರೋಗ್ಯಕ್ಕೀಡಾಗ್ತಿದ್ದು, ಪೋಷಕರು ನಿಮ್ಮ ಮಕ್ಕಳ ಬಗ್ಗೆ ಎಚ್ಚರ ಇರಿ ಎಂದು ತಜ್ಞರು ಹೇಳ್ತಿದ್ದಾರೆ.

ಯಾವೆಲ್ಲಾ ಆರೋಗ್ಯ ಸಮಸ್ಯೆ ಬರ್ತಿದೆ..?

ಮಕ್ಕಳಲ್ಲಿ ಕಂಡು ಬರುತ್ತಿರುವ ಫ್ಲೂ ವೈರಸ್
ಅಲರ್ಜಿ, ರೆಸ್ಪಿರೇಟರಿ ವೈರಲ್ ಇನ್‌ಫೆಕ್ಷನ್
RSV ಸಮಸ್ಯೆ, ಲಂಗ್ಸ್ ಡ್ಯಾಮೇಜ್ ಸಮಸ್ಯೆ
ಜ್ವರದ ಟೆಂಪ್ರೇಚರ್ 103-104 ರಷ್ಟು ಕಂಡು ಬರ್ತಿದೆ

ಅಕಾಲಿಕ ಮಳೆಯಿಂದ ಕುಡಿಯುವ ನೀರಿಗೆ ಕಲುಷಿತ ನೀರು ಮಿಕ್ಸ್ ಆಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಜಾಸ್ತಿ ಆಗ್ತಿದೆ. ಪ್ರತಿ ದಿನ ಮಕ್ಕಳ ಓಪಿಡಿಗೆ 200ರಿಂದ 300 ಕೇಸ್​ಗಳು ಬರ್ತಿದ್ದು, ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಪೋಷಕರಿಗೆ ವೈದ್ಯರ ಸಲಹೆ ಏನು..? 

ಮಕ್ಕಳಿಗೆ ಬಿಸಿ ನೀರನ್ನು ಕುಡಿಸಬೇಕು
ಕಲುಷಿತ ನೀರಿನಲ್ಲಿ ಓಡಾಡಲು ಬಿಡಬಾರದು
ಮಾಸ್ಕ್‌ ಹಾಗೂ ಸ್ವಚ್ಛತೆ ವಹಿಸಬೇಕು
ಹೆಚ್ಚು ತರಕಾರ ಹಾಗೂ ಹಣ್ಣು ನೀಡಬೇಕು
ಜ್ವರವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ

ಒಟ್ನಲ್ಲಿ ಮಳೆಯ ಕಾರಣ ವೈರಲ್ ಫೀವರ್ ಜಾಸ್ತಿ ಆಗ್ತಿದೆ. ಹೀಗಾಗಿ ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಮಳೆ ಹಾವಳಿ ನಿಲ್ಲುವವರೆಗೂ ಪೋಷಕರು ಎಚ್ಚರ ವಹಿಸಬೇಕಿದೆ.

ಸ್ವಾತಿ ಪುಲಗಂಟಿ, ಮೆಟ್ರೋ ಬ್ಯೂರೋ, ಬೆಂಗಳೂರು

RELATED ARTICLES

Related Articles

TRENDING ARTICLES