Tuesday, November 19, 2024

‘ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸಿಲ್ಲ ಯಾಕೆ : ರಾಹುಲ್ ಗಾಂಧಿ

ನವದೆಹಲಿ : ಭಾರತಕ್ಕೆ ಎಂಟು ಚೀತಾಗಳೇನೋ ಬಂದವು. ಆದರೆ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳು ಏಕೆ ಸೃಷ್ಟಿಯಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಶನಿವಾರ 72ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ 8 ಚೀತಾಗಳನ್ನು ಬಿಡಲಾಯಿತು. ಭಾರತದಲ್ಲಿ ಅಳಿದು ಹೋಗಿವೆ ಎಂದು ಘೋಷಿಸಿದ ಏಳು ದಶಕಗಳ ನಂತರ ಮಹತ್ವದ ಯೋಜನೆಯ ಭಾಗವಾಗಿ ಆಫ್ರಿಕಾದಿಂದ ಚೀತಾಗಳನ್ನು ತರಲಾಯಿತು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಹಲವು ಮಹತ್ವಾಕಾಂಕ್ಷೆ ಯೋಜನೆಗಳ ಪೈಕಿ ಒಂದಾಗಿದೆ. ಚೀತಾ ಸಂರಕ್ಷಣೆ ಯೋಜನೆಯನ್ನು ನಿರುದ್ಯೋಗಕ್ಕೆ ತಳಕು ಹಾಕಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಎಂಟು ಚೀತಾಗಳು ಬಂದಿವೆ, ಎಂಟು ವರ್ಷಗಳಲ್ಲಿ 16ಕೋಟಿ ಉದ್ಯೋಗಗಳು ಏಕೆ ಬರಲಿಲ್ಲ ಎಂದು ಈಗ ಹೇಳಿ ಎಂದು ಪ್ರಶ್ನಿಸಿದ್ದಾರೆ.

ನಮಗೆ ಉದ್ಯೋಗಬೇಕು ಎಂದು ದೇಶದ ಯುವಕರು ಗೋಳಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಬೆರೋಜ್​ಗಾರ್ ದಿವಸ್ ಎಂಬ​​ ಹ್ಯಾಷ್​​​ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES