Wednesday, October 30, 2024

ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಕಲಬುರಗಿ : ಬೊಮ್ಮಾಯಿ‌ ಏನಾದರು ಒಳ್ಳೆ ಯೋಜನೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಪ್ರಧಾನಿ ಮೋದಿಯವರನ್ನ ಮೀರಿಸುವ ರೀತಿಯಲ್ಲಿ ಸುಳ್ಳು ಹೇಳೊದು ಕಲಿತಿದ್ದಾರೆ ಎಂದು ಕಲಬುರಗಿ ನಗರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮೋದಿಯವರಿಂದ ಈಗಾಗಲೇ ಅನೇಕ ಯೋಜನೆ ಕಳೆದುಕೊಂಡಿದ್ದೇವೆ. ಇಲ್ಲಿ ಬೊಮ್ಮಾಯಿ‌ಯವರ ಬಂಡಲ್ ಮಾತುಗಳಿಂದ ಜನ ಬೇಸತ್ತಿದ್ದಾರೆ. ಬೊಮ್ಮಾಯಿ‌ ಕಲಬುರಗಿಯಲ್ಲಿ ಭ್ರಷ್ಟೋತ್ಸವ ಮಾಡಲು ಬಂದಿದ್ದಾರ ಎಂದು ಪ್ರಶ್ನಿಸಿದ್ರು. ಸ್ಥಳೀಯ ಮುಖಂಡರಿಂದ ಕಲಬುರಗಿಯಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗಕ್ಕೆ ನಿಮ್ಮ ಕೊಡುಗೆ ಏನು ಅನ್ನೊದು ಸ್ಪಷ್ಟಪಡಿಸಿ ನಾವು ತಂದ ಪ್ರಾಜೆಕ್ಟ್‌ಗಳನ್ನ ತಮ್ಮದೆಂದು ಬೊಮ್ಮಾಯಿ‌ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ರು.

RELATED ARTICLES

Related Articles

TRENDING ARTICLES