Monday, May 20, 2024

ನಾಡ ಹಬ್ಬ ದಸರಾಗೆ ದಿನಗಣನೆ ಆರಂಭ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ನಾಡ ಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ದಸರಾ ಗಜಪಡೆ ಜೊತೆಗೆ ಕಾಡಿನಿಂದ ನಾಡಿಗೆ ಆಗಮಿಸಿರುವ ಮಾವುತ, ಕಾವಾಡಿಗಳಿಗೆ ಇಂದು ರಾಜಾತಿಥ್ಯ ನೀಡಲಾಯಿತು.  ಅದೇ ರೀತಿಯಲ್ಲಿ ಅರಮನೆ ಆಡಳಿತ ಮಂಡಳಿ ವತಿಯಿಂದ ಉಪಹಾರ ವ್ಯವಸ್ಥೆಯನ್ನ ಸಾರ್ವಜನಿಕರಿಗೆ ಕಲ್ಪಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಟಿ.ಸೋಮಶೇಖರ್ ಮಾವುತ, ಕಾವಾಡಿಗಳು, ಅವ್ರ ಕುಟುಂಬದವ್ರಿಗೆ ತಾವೇ ಖುದ್ದು ನಿಂತು ಉಪಹಾರ ಬಡಿಸಿದ್ದು ಇಲ್ಲಿ ವಿಶೇಷವಾಗಿತ್ತು.

ಬರುವ ಅಕ್ಟೋಬರ್ 05 ಕ್ಕೆ ಚಾಮುಂಡಿ ಬೆಟ್ಟದಲ್ಲಿ ದರಸಾ ಉದ್ಘಾಟನೆಯಾಗಲಿದ್ದು, ದಸರಾ ಉದ್ಘಾಟನೆಗೆ ರಾಷ್ಟಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಚಾಮುಂಡಿ ಬೆಟ್ಟದಲ್ಲಿ ಸ್ಥಳವನ್ನ ಇಂದು ಪರಿಶೀಲನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಎಸ್ .ಟಿ ಸೋಮಶೇಖರ್, ಉದ್ಘಾಟನಾ ಕಾರ್ಯಕ್ರಮಕ್ಕೆ 1500 ಚೇರ್ ಗಳ ವ್ಯವಸ್ಥೆ ಮಾಡಲಾಗಿ, 500 ಜನರು ನಿಲ್ಲಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ಭದ್ರತೆಯನ್ನ ಕಲ್ಪಿಸಲಾಗುತ್ತದೆ ಎಂದರು.

RELATED ARTICLES

Related Articles

TRENDING ARTICLES