ಗದಗ: ನಿವೇಶನ ಹಂಚಿಕೆ ವಿಚಾರಕ್ಕೆ ಸಂಬಧಿಸಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿ(ಪಿಡಿಓ)ಯನ್ನ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ತರಾಟೆ ತೆಗೆದುಕೊಂಡಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಯರೇಬೇಲೇರಿ ಗ್ರಾಮದ ನಿವೇಶನ ಹಂಚಿಕೆ ವಿಚಾರವಾಗಿ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿ ಎಂದು ಮಹಿಳೆಯರ ಗೋಳಾಟ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಪಿಡಿಓಗೆ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವರ ಹತ್ತಿರ ಗ್ರಾಮಸ್ಥರು ಮನೆ ನಿವೇಶನ ಯಾವೂ ಕೊಟ್ಟಿಲ್ಲ. ಉಳ್ಳವರಿಗೆ ಕೊಟ್ಟಿದ್ದಾರೆ ಎಂದು ಮಹಿಳೆಯರ ತೋಡಿಕೊಂಡಿದ್ದಾರೆ. ಈ ವೇಳೆ ಪಿಡಿಓಗೆ ಅನರ್ಹ ಫಲಾನುಭವಿಗಳಿದ್ದರೆ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಿ, ಅವ ಬೇಕಾದ್ದಂತ ಪವರ್ ಫುಲ್ ಇರಲಿ, ಬೇಕಾದ್ದಂತಹ ಪಕ್ಷ ಇರಲಿ. ನನಗೇನು 10 ಓಟು ಕಮ್ಮಿ ಬಿದ್ರೂ ನಾ ತಲೆಕೆಡಿಸಿಕೊಳ್ಳಲ್ಲ ಎಂದು ಪಿಡಿಓಗೆ ತರಾಟೆಗೆ ತೆಗೆದುಕೊಮಂಡರು.
ಇನ್ನು ನಿವೇಶನ ಹಂಚಿಕೆಯಲ್ಲಿ ಯಾವುದೇ ಪಕ್ಷದವರಿಗೆ ಹಂಚಿಕೆ ಮಾಡಲಿ, ಅವರನ್ನ ಕಿತ್ತೆಸೆಯಿರಿ, ಬೇರೇ ಊರಲ್ಲಿ ಹತ್ತು ಓಟು ಜಾಸ್ತಿ ತಗೋತೀನಿ, ಇಲ್ಲಿ ರಾಜಕಾರಣ ಇದೆ, ರಾಜಕಾರಣಕ್ಕೆ ಬಗ್ಗಬೇಡಿ, ಅರ್ಹ ಫಲಾನುಭವಿಗಳಿಗೆ ಸೇರಿಸಿ ಮಾಹಿತಿ ಕಳುಹಿಸಿ, ಅನರ್ಹ ಫಲಾನುಭವಿಗೆ ಸೇರಿಸಿದ್ರೆ ಗ್ರಾಮ ಪಂಚಾಯತಿ ಅಧ್ಯಕ್ಷರ ಮೇಲೆ ಕೇಸ್ ಬುಕ್ ಮಾಡ್ತಿನಿ ಅಂತ ಸಚಿವರು ಖಡಕ್ ವಾರ್ನಿಂಗ್ ನೀಡಿದ್ದಾರೆ.