Wednesday, January 22, 2025

ವಿಮ್ಸ್​ ಆಸ್ಪತ್ರೆಯಲ್ಲಿ 3 ಸಾವು ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ನೀಡಿದ ವಿಮ್ಸ್‌ ನಿರ್ದೇಶಕ

ಬಳ್ಳಾರಿ: ವಿದ್ಯುತ್‌ ಕಡಿತ, ಜನರೇಟರ್‌ ಕೆಲಸ ಮಾಡದ್ದರಿಂದ ತೀವ್ರ ನಿಗಾ ಘಟಕದಲ್ಲಿ(ICU) ದಾಖಲಾಗಿದ್ದ ಮೂವರು ರೋಗಿಗಳು ಮೃತಪಟ್ಟಿರುವ ಕೇಸ್​ಗೆ ಈಗ ಬಿಗ್​ ಟ್ವಿಸ್ಟ್​​ ಸಿಕ್ಕಿದೆ.

ಹೌದು ಕಳೆದ ಕೆಲವು ದಿನಗಳ ಹಿಂದೆ ವಿಮ್ಸ್‌ ನಲ್ಲಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಸಾವೀಗಿಡಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಿದ್ದರು.

ಆದ್ರೀಗ ಈ ಕೇಸ್​ಗೆ ಸಂಬಂಧಿಸಿದಂತೆ ಬಿಗ್​ ಟ್ವಿಸ್ಟ್​ ಸಿಕ್ಕಿದ್ದು, ಈ ಘಟನೆ ಕೆಲವರಿಂದ ದುರುದ್ದೇಶದ ಸಂಚು ಎಂದು ವಿಮ್ಸ್‌ ನಿರ್ದೇಶಕ ಡಾ.ಗಂಗಾಧರ ಗೌಡ ಸ್ಪಷ್ಟಪಡಿಸಿದ್ದಾರೆ.

ಈ ಸಾವು ಪ್ರಕರಣ ಕೆಲವರಿಂದ ದುರುದ್ದೇಶದ ಸಂಚು, ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ದುರುದ್ದೇಶದ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಸಮಗ್ರ ಮಾಹಿತಿ ಹಾಗೂ ದಾಖಲಾತಿ ಸಂಗ್ರಹಿಸಿ ಎಫ್ಐಆರ್ ದಾಖಲಿಸುವೆ, ಕೆಲವೇ ದಿನಗಳಲ್ಲಿ ಈ ಪ್ರಕರಣದ ಬಗ್ಗೆ ನಿಜಾಂಶ ಹೊರಬರಲಿದೆ ಎಂದು ಬಾಂಬ್​ ಸಿಡಿಸಿದ್ದಾರೆ.

RELATED ARTICLES

Related Articles

TRENDING ARTICLES