Monday, December 23, 2024

ಸಿ ಟಿ ರವಿ ಇನ್ನೂ ಬಚ್ಚಾ ಇದ್ದಾನೆ : ರಾಘವೇಂದ್ರ ಹಿಟ್ನಾಳ್

ಕೊಪ್ಪಳ : ಸಿಟಿ ರವಿ ಇನ್ನೂ ಬಚ್ಚಾ ಇದ್ದಾನೆ ಎಂದು ಸಿಟಿ ರವಿ ವಿರುದ್ಧ ಶಾಸಕ ರಾಘವೇಂದ್ರ ಹಿಟ್ನಾಳ್ ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ರಾಷ್ಟ್ರ ಮಟ್ಟದ ನಾಯಕನಾಗುತ್ತೇನೆಂಬ ಭಮ್ರೆಯಲ್ಲಿದ್ದಾರೆ. ಸಿದ್ದರಾಮೋತ್ಸವದಲ್ಲಿ ಲಕ್ಷ ಲಕ್ಷ ಜನ ಸೇರಿದ್ದರು, ಸಿಟಿ ರವಿಗೆ ಅನುಭವದ ಕೊರತೆ ಇದೆ, ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಇನ್ನು, ಸದನದಲ್ಲಿ ಸಿದ್ದರಾಮಯ್ಯ ಸಮರ್ಥ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ಲೋಪದೋಷಗಳನ್ನು ಎತ್ತಿಹಿಡಿಯವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿಯೇ ಅತ್ಯುತ್ತಮ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಬೈದರೆ ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತೇನೆ ಎನ್ನುವ ಭಮ್ರೆ ಇದೆ. ಇದರಿಂದ ಅವರ ಕೀಳುಮಟ್ಟ ತೋರಿಸುತ್ತದೆ. ಅಭಿವೃದ್ಧಿ ಮಾಡುವ ಮೂಲಕ ನಾಯಕರ,ಜನರ ಮನಸ್ಸನ್ನು ಗೆಲ್ಲಬೇಕು. ಅವಹೇಳನಕಾರಿಯಾಗಿ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES