ಕೊಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಭಾರತ ತಂಡವನ್ನ ನಾಯಕತ್ವ ವಹಿಸಿಕೊಂಡ ವೇಳೆಯಲ್ಲಿ ಭಾರತ ತಂಡವನ್ನ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು ಎಂದು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಗುಣಗಾನ ಮಾಡಿದರು.
ಇಂದು ಕೊಲ್ಕತ್ತಾದಲ್ಲಿ ಮಾತನಾಡಿದ ಜಾನ್ಸನ್, ವಿರಾಟ್ ಕೊಹ್ಲಿ ತಮ್ಮ ತಂಡಕ್ಕಾಗಿ ಅತ್ಯುತ್ತಮ ರನ್ ಕಲೆಹಾಕಿ ಆಟಗಾರರಲ್ಲಿ ಉತ್ಸಹ ತುಂಬುತ್ತಿದ್ದರು. ಅವರು ನಾಯಕತ್ವ ವಹಿಸಿಕೊಂಡಾಗ ಭಾರತ ತಂಡದ ದಿಕ್ಕನ್ನೆ ಬದಲಿಸಿದ ವ್ಯಕ್ತಿ. ಈಗ ಮತ್ತೆ ಕೊಹ್ಲಿ ಫಾರ್ಮ್ಗೆ ಮರಳಿರೋದು ಸಂತಸ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ಗೆ ಮರಳಿ ರನ್ಗಳಿಸುತ್ತಿರುವುದು ಟೀಂ ಇಂಡಿಯಾಕ್ಕೆ ಒಳ್ಳೆಯದು ಎಂದರು.
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ ನಲ್ಲಿ ಕೊಹ್ಲಿ, ತಮ್ಮ ಬ್ಯಾಟ್ ಮೂಲಕ ಸಾಮರ್ಥ್ಯವನ್ನ ತೋರಿಸಿದ್ದರು. ಇದರಲ್ಲಿ ಅವರು ತಮ್ಮ 71 ನೇ ಅಂತರರಾಷ್ಟ್ರೀಯ ಶತಕವನ್ನು ಭರ್ಜರಿಯಾಗಿ ಸಿಡಿಸಿದ್ದರು.
ಏಷ್ಯಾಕಪ್ನಲ್ಲಿ ವಿರಾಟ್ ಒಟ್ಟು 276 ರನ್ ಗಳಿಸಿದರು. ಒಂದು ಶತಕ ಮತ್ತು ಎರಡು ಅರ್ಧಶತಕಗಳು ಕೊಹ್ಲಿಯ ಬ್ಯಾಟ್ನಿಂದ ಸಿಡಿದು ಬಂದಿತ್ತು. ಅಫ್ಘಾನಿಸ್ತಾನದ ವಿರುದ್ಧ ವಿರಾಟ್ ಬ್ಯಾಟ್ನಿಂದ ಶತಕ ಬಂದಿತ್ತು. ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ (281) ನಂತರ ಎರಡನೇ ಸ್ಥಾನದಲ್ಲಿ ಏಷ್ಯಾಕಪ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ್ದರು.