Thursday, January 23, 2025

ಡಾಲಿ – ರಚ್ಚು ಮಾನ್ಸೂನ್ ರಾಗದಲ್ಲಿ ಮಿಂದೆದ್ದ ಪ್ರೇಕ್ಷಕಪ್ರಭು

ನಟ ರಾಕ್ಷಸ, ನಟ ಭಯಂಕರ, ಅಭಿನಯ ಅಂತಾ ಬಂದ್ರೆ ತನ್ನನ್ನೇ ಮರೆಯೋ ಅಭಿನಯ ವಿಶಾರದ ಡಾಲಿ ಧನಂಜಯ ನಟನೆಯ ಮಾನ್ಸೂನ್ ರಾಗ ಸಿನಿಮಾ ತೆರೆಗೆ ಕಂಡಿದೆ. ರಾಜ್ಯಾದ್ಯಂತ ಮತ್ತೆ ಮಾನ್ಸೂನ್​ ಎಫೆಕ್ಟ್​​​ಗೆ ಪ್ರೇಕ್ಷಕರು ಥಂಡಾ ಹೊಡೆದಿದ್ದಾರೆ. ಯೆಸ್​​​.. ರಚ್ಚು ಕಣ್ಣುಗಳಲ್ಲೇ  ಮಿಂಚಿದ್ರೆ, ಡಾಲಿ ನಟನೆಯ ಮೂಲಕ ಗುಡುಗಿದ್ದಾನೆ. ಹೇಗಿದೆ ಮಾನ್ಸೂನ್​ ರಾಗ ಕಥೆ..? ಸಿನಿಮಾ ನೋಡಿದ ಪ್ರೇಕ್ಷಕರು ಏನಂದ್ರು..? ಸಿನಿಮಾದ ಪ್ಲಸ್​ ಮೈನಸ್​ ಏನು..? ನಾವ್​ ಹೇಳ್ತೀವಿ. ನೀವೇ ಓದಿ.

  • ಡೊಳ್ಳು ಕುಣಿತದೊಂದಿಗೆ ನಟರಾಕ್ಷಸನಿಗೆ ಗ್ರ್ಯಾಂಡ್​ ವೆಲ್ಕಮ್​​​​

ಡಾಲಿ, ರಚ್ಚು ಕಾಂಬೋದಲ್ಲಿ ವಿಭಿನ್ನ ಸಿನಿಮಾವೊಂದು ಸೆಟ್ಟೇರ್ತಿದೆ ಎಂದಾಗ್ಲೇ ಚಿತ್ರಪ್ರೇಮಿಗಳ ಎದೆಯಲ್ಲಿ ಹೊಸ ಬಡಿತ ಶುರುವಾಗಿತ್ತು. ಇಂದು ರಾಜ್ಯಾದ್ಯಂತ ರಿಲೀಸ್​ ಆಗಿರೋ ಮಾನ್ಸೂನ್​ ರಾಗ ಸಿನಿಮಾ ನೋಡಿ ಪ್ರೇಕ್ಷಕರ ದಿಲ್​ ಖುಷ್​ ಆಗಿದ್ದು, ಇಟ್ಟ ನಿರೀಕ್ಷೆಗಳೆಲ್ಲಾ ನಿಜವಾಗಿವೆ. ಇನ್ನು ಥಿಯೇಟರ್​​ ಮುಂದೆ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು.

ಕನ್ನಡದಲ್ಲಿ ಹೊಸ ಬಗೆ, ಹೊಸತನದ ಕಥೆಯೊಂದಿಗೆ ರಾಜ್ಯಾದ್ಯಂತ ರಿಲೀಸ್​ ಅಗಿರೋ ಮಾನ್ಸೂನ್​ ರಾಗ ಹೌಸ್​​​ಫುಲ್​ ಪ್ರದರ್ಶನ ಕಾಣ್ತಿದೆ. ಥಿಯೇಟರ್​ ಮುಂದೆ ಮಾನ್ಸೂನ್​ ಸಿನಿಮಾದ ಕಟೌಟ್​ಗಳು ರಾರಾಜಿಸುತ್ತಿದ್ದು, ಡೊಳ್ಳು ಕುಣಿತದೊಂದಿಗೆ ಫಸ್ಟ್​​ ಡೇ ಫಸ್ಟ್​ ಶೋನ ಗ್ರ್ಯಾಂಡ್​ ವೆಲ್ಕಮ್​ ಮಾಡಲಾಗಿದೆ.

ಚಿತ್ರ: ಮಾನ್ಸೂನ್​ ರಾಗ

ನಿರ್ದೇಶನ: ಎಸ್​​​. ರವೀಂದ್ರನಾಥ್​​

ನಿರ್ಮಾಣ: ಎ.ಆರ್​​​​​ ವಿಖ್ಯಾತ್​​​

ಸಂಗೀತ: ಜೆ. ಅನೂಪ್ ಸೀಳಿನ್

ಸಿನಿಮಾಟೋಗ್ರಫಿ: ಎಸ್​​. ಕೆ ರಾವ್​​​

ತಾರಾಗಣ: ಡಾಲಿ ಧನಂಜಯ, ರಚಿತಾ ರಾಮ್​​​, ಯಶಾ ಶಿವಕುಮಾರ್​​​, ಸುಹಾಸಿನಿ ಮಣಿರತ್ನಂ, ಅಚ್ಯುತ್​ ಕುಮಾರ್​​​ ಮುಂತಾದವರು.

ಮಾನ್ಸೂನ್​ ರಾಗ ಸ್ಟೋರಿಲೈನ್​

ಇಲ್ಲಿವರೆಗೂ ನೋಡಿರದ ಪಾತ್ರದಲ್ಲಿ ಡಾಲಿಯನ್ನು ಕಣ್ತುಂಬಿಕೊಳ್ಳೋ ಛಾನ್ಸ್​​ ನಿಮ್ಮದಾಗಲಿದೆ. ಸಿನಿಮಾದಲ್ಲಿ ನಾಲ್ಕು ಪ್ರೇಮ ಕಥೆಗಳು ನಿಮ್ಮನ್ನು ಪ್ರೇಮಲೋಕದಲ್ಲಿ ಸುತ್ತಾಡಿಸುತ್ತವೆ. ತೆರೆಯ ಮೇಲಿನ ರಣ ರಣ ಮಳೆಯ ನಡುವೆ ಪ್ರೀತಿಯ ಸೆಳೆತ ನಿಮ್ಮನ್ನು ಕಥೆಗೆ ಹತ್ತಿರವಾಗಿಸುತ್ತವೆ. ಯೆಸ್​​.. ಸಿನಿಮಾದಲ್ಲಿ ಎಲ್ಲಾ ವಯೋಮಾನದ ಅನುರಾಗ ಸಂಗಮವಿದೆ. ರಚ್ಚು ಡಾಲಿ ಪ್ರೇಮ ಸಂಬಂಧ ನಿಮ್ಮನ್ನು ಗಿರಕಿ ಹೊಡೆಸಿದ್ರು, ನಿಮ್ಮನ್ನೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತದೆ. ಜಾತಿ, ಧರ್ಮ, ಸ್ನೇಹ, ಪ್ರೀತಿ, ವಯಸ್ಸಿನ ಅಂತರವಿಲ್ಲದ ಅನುರಾಗವನನ್ನು ಮಳೆಯೊಂದಿಗೆ ತಳುಕು ಹಾಕಿದ್ದಾರೆ ನಿರ್ದೇಶಕ ರವೀಂದ್ರನಾಥ್​​​.

ಶಾಲೆಯಲ್ಲಿ ಅರಳುವ ಸ್ವಚ್ಛ ಪ್ರೀತಿ, ಯಂಗ್​ ಏಜ್​​​​ ಲವ್​ ಸ್ಟೋರಿ, ಸೆಕ್ಸ್​ ವರ್ಕರ್​​ ಜತೆಗೆ ಬಾರ್​​ ಬಾರ್ ಕಹಾನಿ, ಇಳಿ ವಯಸ್ಸಿನ ಆಸರೆಯ ಪ್ರೇಮ, ಎಲ್ಲವೂ ಒಂದೊಂದು ದಾರಿ. ಕೊನೆಗೆ ಎಲ್ಲವೂ ಕ್ಲೈಮ್ಯಾಕ್ಸ್​ನಲ್ಲಿ ಸೇರುವಾಗ ಸಖತ್​ ಥ್ರಿಲ್ಲಿಂಗ್​ ಅನುಭವ ಸಿಗೋದು ಪಕ್ಕಾ. ಇದೆ ಕಥೆಯ ತಿರುಳು.

ಮಾನ್ಸೂನ್​ ರಾಗ ಆರ್ಟಿಸ್ಟ್ ಪರ್ಫಾಮೆನ್ಸ್

ಬಾರ್​ ಸಪ್ಲೈಯರ್ ಆಗಿ ಸಂಪೂರ್ಣ ಡಿಫರೆಂಟ್​ ರೋಲ್​ನಲ್ಲಿ ಡಾಲಿ ಕಂಡ್ರೆ, ಸೆಕ್ಸ್​ ವರ್ಕರ್​ ರೋಲ್​ನಲ್ಲಿ ಬೋಲ್ಡ್​ ಅಂಡ್​ ಬ್ಯೂಟಿಫುಲ್​ ಆಗಿ ರಚ್ಚು ಅಚ್ಚರಿ ಮೂಡಿಸಿದ್ದಾರೆ. ಯಶಾ ಆಟಿಟ್ಯೂಡ್​ ಗರ್ಲ್​​ ಆಗಿ ಚಮ್ಕಾಯಿಸಿದ್ದಾರೆ. ಜತೆಗೆ ಅಚ್ಯುತ್​​​ ಅಗೈನ್​​ ಪರಕಾಯ ಪ್ರವೇಶ ಮಾಡಿದ್ದಾರೆ. ಸುಹಾಸಿನಿಯ ಹಾಸ ಇಲ್ಲೂ ಕಂಟಿನ್ಯೂ ಆಗಿದೆ. ಬಾಲ ಕಲಾವಿದ ನಿಹಾಲ್​​, ಸಿಂಚನಾ ಸಿಕ್ಸರ್​ ಬಾರಿಸಿದ್ದಾರೆ. ಸಿನಿಮಾದಲ್ಲಿ ಎಲ್ಲವೂ ಸಮತೋಲನವಾಗಿದೆ.

ಮಾನ್ಸೂನ್​ ರಾಗ ಪ್ಲಸ್ ಪಾಯಿಂಟ್ಸ್

ವಿಶ್ಯುಯೆಲ್​ ಟ್ರೀಟ್​​​

ಕಣ್ಮನ ತಣಿಸೋ ಲೊಕೇಷನ್ಸ್​​

ಥ್ರಿಲ್ಲಿಂಗ್​ ಕ್ಲೈಮ್ಯಾಕ್ಸ್​​

ಕ್ಯಾಮೆರಾ ಕೈಚಳಕ

ಡಾಲಿ ವಿಭಿನ್ನ ಮ್ಯಾನರಿಸಂ

ರಚ್ಚು ಬೋಲ್ಡ್​​​ ಕ್ಯಾರೆಕ್ಟರ್​​

ಮಾನ್ಸೂನ್​ ರಾಗ ಮೈನಸ್​​ ಪಾಯಿಂಟ್ಸ್

ತೆಲುಗಿನ ಕೇರ್​ ಆಫ್​ ಕಂಚಾರಪಾಲೆಂ ಚಿತ್ರದ ರಿಮೇಕ್​ ಕಥೆ ಇದಾಗಿದ್ದು, ಅದೇ ಕಥೆಗೆ ಸ್ವಲ್ಪ ಮಸಾಲೆ ಬೆರಸಲಾಗಿದೆ. ಮಳೆಯ ಪ್ಲೇವರ್​​ನಲ್ಲಿ ಸಿನಿಮಾ ವಿಭಿನ್ನವಾಗಿದ್ದರೂ ಡಾಲಿ ಎಲ್ಲ ಇಮೇಜ್​ ಮರೆತು ಸಿನಿಮಾ ಮಾಡಿದ್ದಾರೆ. ಲೈವ್​ ಮ್ಯಾಚ್​ ನೋಡಿದ್ದರೂ, ಈ ಸಿನಿಮಾ ಹೈಲೈಟ್ಸ್​ನಂತೆ ಮನರಂಜನೆ ನೀಡಲಿದೆ.

ಮಾನ್ಸೂನ್​ ರಾಗ ಪವರ್ ಟಿವಿ ರೇಟಿಂಗ್: 3.5/5

ಮಾನ್ಸೂನ್​ ರಾಗ ಫೈನಲ್ ಸ್ಟೇಟ್​ಮೆಂಟ್

ಪುಟ್ಟಣ್ಣ ಕಣಗಲ್​ ನಿರ್ದೇಶನದ ಕಥಾಸಂಗಮ ಸಿನಿಮಾ ನೆನಪಿಸುವ ವಿಭಿನ್ನ, ವಿಶಿಷ್ಠ ಸಿನಿಮಾ ಮಾನ್ಸೂನ್​ ರಾಗ. ಎಸ್​​​.ಕೆ ರಾವ್​​ ಕ್ಯಾಮೆರಾ ಕಣ್ಣಲ್ಲಿ ಕರಾವಳಿ ಸೌಂದರ್ಯ ಮಜಭೂತಾಗಿದೆ. ಜತೆಗೆ ಪ್ರತಿ ಫ್ರೇಮಿನಲ್ಲೂ ಮಳೆಯ ಹನಿಗಳು ಕಣ್ಣಿಗೆ ರಾಚುತ್ತವೆ. ವಿಖ್ಯಾತ್​​ ಭರವಸೆಯ ಮೇಲೆ ನಿರ್ಮಾಣವಾದ ಸಿನಿಮಾಗೆ ಪ್ರೇಕ್ಷಕ ಒಪ್ಪಿ ಅಪ್ಪಿದ್ದಾನೆ. ಎನಿವೇ ವೀಕೆಂಡ್​​ಗೆ ಒಂದೊಳ್ಳೆ ಸಿನಿಮಾ ನೋಡ್ಬೇಕಾದ್ರೆ ಮಾನ್ಸೂನ್​ ರಾಗ ಸಿನಿಮಾ ನೋಡಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES