Monday, December 23, 2024

ದೂಳು ಎಬ್ಬಿಸಿದ ‘ಕಬ್ಜ’ ಟೀಸರ್​​; ಹೇಗಿದೆ ನೋಡಿ​.!

ಬೆಂಗಳೂರು: ಕೆಜಿಎಫ್ ಸಿನಿಮಾ ನಂತರ ಕನ್ನಡದಿಂದ ಮೋಸ್ಟ್​ ಎಕ್ಸ್​ಪೆಕ್ಟೆಡ್​, ನಟ ಉಪೇಂದ್ರ ನಟನೆಯ ಕಬ್ಜ ಸಿನಿಮಾದ ಟೀಸರ್​ನ್ನ ಇಂದು ಬಾಹುಬಲಿ ನಟ ರಾಣಾ ದಗ್ಗುಬಾಟಿ ಬಿಡುಗಡೆ ಮಾಡಿದರು.

ನಾಳೆ(ಸೆಪ್ಟೆಂಬರ್​ 18) ಉಪೇಂದ್ರ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಇಂದು ಟೀಸರ್ ಲಾಂಚ್ ಮಾಡಲಾಯಿತು. ಕನ್ನಡ ಸೇರಿ ಏಳು ಭಾಷೆಯಲ್ಲಿ ಕಬ್ಜ ಸಿನಿಮಾ ತೆರೆಗೆ ಬರುತ್ತಿದೆ. ಸುಮಾರು 100 ಕೋಟಿ ರೂ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, 1942ರ ರೆಟ್ರೋ ಅಂಡರ್’ವರ್ಲ್ಡ್ ಸುತ್ತ ಸಿನಿಮಾದ ಕಥೆಯನ್ನ ಹೆಣೆಯಲಾಗಿದೆ.

ನಟಿ ಶ್ರೀಯಾ ಶರಣ್​

ಉಪೇಂದ್ರ & ಕಿಚ್ಚ ಸುದೀಪ್ ನಟನೆಯ ಕಬ್ಜ, ನಾಯಕಿಯಾಗಿ ಶ್ರೀಯಾ ಶರಣ್​ ನಟಿಸುತ್ತಿದ್ದಾರೆ. ಆರ್​. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಕಬ್ಜ ಸಿನಿಮಾದ ಟೀಸರ್ ಆನಂದ್​ ಆಡಿಯೋದಲ್ಲಿ ಯೂಟ್ಯೂಬ್​​ ಚಾನಲ್​ನಲ್ಲಿ ಲಭ್ಯವಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಟೀಸರ್​ ಯೂಟ್ಯೂಬ್​ನಲ್ಲಿ ದೂಳು ಎಬ್ಬಿಸಿದೆ.

RELATED ARTICLES

Related Articles

TRENDING ARTICLES