Wednesday, January 22, 2025

ಉಪ್ಪಿ, ಕಿಚ್ಚ ಕಬ್ಜ ಖದರ್.. ರಾಣಾ, RRR ಪ್ರೊಡ್ಯೂಸರ್ ಪವರ್

ಕನ್ನಡದಿಂದ ಬರ್ತಿರೋ ಈ ವರ್ಷದ ಮೋಸ್ಟ್ ಎಕ್ಸ್​ಪೆಕ್ಟೆಡ್ ಪ್ಯಾನ್ ಇಂಡಿಯಾ ಮೂವಿ ಕಬ್ಜ ಟೀಸರ್ ಲಾಂಚ್​ಗೆ ಕೌಂಟ್​ಡೌನ್ ಶುರುವಾಗಿದೆ. ಶೋ ರೀಲ್ ನೋಡಿ ದಂಗಾಗಿರೋ ಪರಭಾಷಾ ಫಿಲ್ಮ್ ಮೇಕರ್ಸ್​, ಇದ್ರ ಡಿಸ್ಟ್ರಿಬ್ಯೂಷನ್​ಗೆ ಮುಗಿ ಬೀಳ್ತಿದ್ದಾರೆ. ಈ ಮಧ್ಯೆ ಪ್ಯಾನ್ ಇಂಡಿಯಾ ಪ್ರೆಸ್​ಮೀಟ್​ನ ಹೋಸ್ಟ್ ಮಾಡೋಕೆ ಬಾಹುಬಲಿ ಸ್ಟಾರ್ ಬರ್ತಿದ್ದಾರೆ.

  • ಹೈ ವೋಲ್ಟೇಜ್ ಟೀಸರ್ ಬಗ್ಗೆ ಆಲ್ ಇಂಡಿಯಾ ಕಟೌಟ್ ಟಾಕ್
  • ಅಂದು ಕರಣ್ ಜೋಹರ್.. ಇಂದು ರಾಣಾ ದಗ್ಗುಬಾಟಿ ಹೋಸ್ಟ್
  • ಪ್ಯಾನ್ ಇಂಡಿಯಾ ಚಿತ್ರದ ಫಸ್ಟ್ ಪ್ಯಾನ್ ಇಂಡಿಯಾ ಸುದ್ದಿಗೋಷ್ಠಿ

ದಿ ವೆಯ್ಟ್ ಈಸ್ ಓವರ್. ಇಡೀ ಉಪ್ಪಿ ಅಭಿಮಾನಿ ಸಮೂಹ ಬಹಳ ಕಾತರದಿಂದ ಕಾಯ್ತಿರೋ ಕಬ್ಜ ಟೀಸರ್ ಲಾಂಚ್​ಗೆ ಕೆಲ ಗಂಟೆಗಳಷ್ಟೇ ಬಾಕಿಯಿದೆ. ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು ತಮ್ಮ ಡ್ರೀಮ್ ಪ್ರಾಜೆಕ್ಟ್​ನ ಎಷ್ಟೊಂದು ಇಷ್ಟ ಮತ್ತು ಕಷ್ಟ ಪಟ್ಟು ಮಾಡ್ತಿದ್ದಾರೋ, ಅದ್ರ ಪ್ರೊಮೋಷನ್ಸ್​ಗೂ ಅಷ್ಟೇ ಪ್ರಮಾಣದಲ್ಲಿ ತಲೆ ಕೆಡಿಸಿಕೊಳ್ತಿದ್ದಾರೆ. ಸೆಪ್ಟೆಂಬರ್ 17ರ ಸಂಜೆ ಆಗಲಿರೋ ಕಬ್ಜ ಟೀಸರ್ ಲಾಂಚ್​ ನೂತನ ದಾಖಲೆ ಬರೆಯಲಿದೆ.

ಯೆಸ್.. ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಕಬ್ಜ, ಇಲ್ಲಿಯವರೆಗೂ ಸ್ಟಿಲ್ ಫೋಟೋಸ್ ಹಾಗೂ ಮೇಕಿಂಗ್​ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಅದ್ರಲ್ಲೂ ಅಭಿಮಾನಿಗಳ ಚಕ್ರವರ್ತಿ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೆಗಾ ಮಲ್ಟಿಸ್ಟಾರ್ ಕಾಂಬೋ ಇದಾಗಿದ್ದು, ಶಿವಾಜಿ ಕಾ ಜಾನ್ ಶ್ರಿಯಾ ಸರಣ್ ಕೂಡ ಕ್ವೀನ್ ಖದರ್​ ತೋರಲಿದ್ದಾರೆ. ಭಾರ್ಗವ್ ಭಕ್ಷಿಯಾಗಿ ಕಿಚ್ಚನ ಮೀಸೆ ಜಬರ್ದಸ್ತ್ ಆಗಿದ್ದು, ಮುಕ್ತವಾಗಿ ಮಾತನಾಡಿದ್ದಾರೆ ಆಲ್ ಇಂಡಿಯಾ ಕಟೌಟ್.

ನೂರು ಕೋಟಿ ಬೃಹತ್ ವೆಚ್ಚದಲ್ಲಿ ಏಳು ಇಂಡಿಯನ್ ಲಾಂಗ್ವೇಜಸ್​ನಲ್ಲಿ ತಯಾರಾಗ್ತಿರೋ ಈ ಸಿನಿಮಾ ಮೇಕಿಂಗ್ ಹಂತದಲ್ಲೇ ಪರಭಾಷಾ ಮೇಕರ್ಸ್​ನ ಹುಬ್ಬೇರಿಸ್ತಿದೆ. ಪಕ್ಕದ ಟಾಲಿವುಡ್​ನಲ್ಲಿ ತ್ರಿಬಲ್ ಆರ್ ಚಿತ್ರದ ನಿರ್ಮಾಪಕ ಡಿವಿವಿ ದಾನಯ್ಯ ಅವ್ರನ್ನ ಇಂಪ್ರೆಸ್ ಮಾಡಿರೋ ಕಬ್ಜ ಶೋ ರೀಲ್, ದೊಡ್ಡ ಮೊತ್ತಕ್ಕೆ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸೋಕೆ ಮುಂದಾಗುವಂತೆ ಮಾಡಿದೆ.

ಆದ್ರೆ ಇದೇ ಶನಿವಾರ ಸಂಜೆ ನಡೆಯಲಿರೋ ಟೀಸರ್ ಲಾಂಚ್ ಇವೆಂಟ್​ ಒರಾಯನ್ ಮಾಲ್​ನಲ್ಲಿ ರಂಗೇರಲಿದ್ದು, 200ಕ್ಕೂ ಅಧಿಕ ಪ್ಯಾನ್ ಇಂಡಿಯಾದ ಫಿಲ್ಮ್ ರಿಪೋರ್ಟರ್ಸ್​ ನಮ್ಮ ಸಿಲಿಕಾನ್ ಸಿಟಿಗೆ ಬರಲಿದ್ದಾರೆ. ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವಣ್ಣ ಚೀಫ್ ಗೆಸ್ಟ್ ಆಗಿ ಆಗಮಿಸುತ್ತಿದ್ದು, ಉಪ್ಪಿ- ಕಿಚ್ಚ, ಶ್ರಿಯಾ ಸರಣ್ ಇರಲಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಅನುಶ್ರೀ ಜೊತೆ ಬಾಹುಬಲಿಯ ಬಲ್ಲಾಳದೇವ ರಾಣಾ ಗದ್ದುಬಾಟಿ ಹೋಸ್ಟ್ ಮಾಡ್ತಿದ್ದಾರೆ ಅನ್ನೋದು ಇಂಟರೆಸ್ಟಿಂಗ್.

ಅಂದು ಕೆಜಿಎಫ್-2 ಟ್ರೈಲರ್ ಲಾಂಚ್​ಗಾಗಿ ಬಾಲಿವುಡ್​ನಿಂದ ಕರಣ್ ಜೋಹರ್ ಬಂದಿದ್ರು. ಇಂದು ಟಾಲಿವುಡ್​ನಿಂದ ಬಾಲಿವುಡ್​ನಲ್ಲೂ ಛಾಪು ಮೂಡಿಸಿರೋ ರಾಣಾ ಬರ್ತಿರೋದು ನಿಜಕ್ಕೂ ಹೆಮ್ಮೆಯ ವಿಷ್ಯ. ಅದೇನೇ ಇರಲಿ ಆರ್ ಚಂದ್ರು ಅವ್ರು ಇಂತಹ ಮೆಗಾ ಪ್ರಾಜೆಕ್ಟ್​ಗೆ ಕೈ ಹಾಕಿ, ಅದನ್ನ ಬಾಲಿವುಡ್ ಮಂದಿ ಕೂಡ ಕಣ್ಣು, ಬಾಯಿ ಬೊಟ್ಕೊಂಡು ನೋಡೋ ಅಂತಹ ಪ್ರಾಡಕ್ಟ್ ಆಗಿ ನೀಡ್ತಿರೋದು ಖುಷಿಯ ವಿಚಾರ. ಇನ್ನು ಬಾಕ್ಸ್ ಆಫೀಸ್ ಕಬ್ಜ ಮಡೋಕೆ ಈ ರೆಟ್ರೋ ಸಾಗಾ ಎಂಟರ್​ಟೈನರ್ ಈಗಲೇ ಕ್ರೇಜ್, ಹವಾ ಹುಟ್ಟಿಸಿದ್ದು, ಇತಿಹಾಸದ ಪುಟಗಳಲ್ಲಿ ಉಳಿಯೋ ಅಂತಹ ದಾಖಲೆ ಬರೆಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ   

RELATED ARTICLES

Related Articles

TRENDING ARTICLES