Monday, December 23, 2024

ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ

ಹಾಸನ : ಕಾಡಿನಿಂದ ನಾಡಿಗೆ ಆನೆ ಬಂದ ಒಂಟಿ ಸಲಗ ಸಕಲೇಶಪುರ ತಾಲೂಕಿನ ಗ್ರಾಮಗಳಲ್ಲಿ ಓಡಾಟ ನಡೆಸಿದ್ದು, ಗ್ರಾಮಸ್ಧರಲ್ಲಿ ಭಯ ಉಂಟು ಮಾಡಿದೆ.

ಮಲೆನಾಡು ಭಾಗದಲ್ಲಿ ಇನ್ನು ನಿಂತಿಲ್ಲ ಗಜ ಗಲಾಟೆ ಗ್ರಾಮದೊಳಗೆ ಗಂಭೀರವಾಗಿ ಹೆಜ್ಜೆ ಹಾಕುತ್ತ ಮನೆ ಮುಂದೆ ಬಂದ ಗಜರಾಜ. ಸಕಲೇಶಪುರ ತಾಲೂಕಿನ ಗ್ರಾಮಗಳಲ್ಲಿ ನಿತ್ಯವೂ ಗಜರಾಜ ಎಂಟ್ರಿಯಾಗಿದೆ. ಹಲಸುಲಿಗೆ, ಮಠಸಾಗರ, ಉದೇವಾರ, ಜಾನೇಕೆರೆ, ಸತ್ತಿಗಾಲ್, ಹಾಲೇಬೇಲೂರು, ಸುಂಡೇಕೆರೆ ಅನೇಕ ಗ್ರಾಮಗಳಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದೆ.

ಇನ್ನು, ಆನೆಗಳ ಕಾಟದಿಂದಾಗಿ ಮನೆಯಿಂದ ಹೊರಬಾರದ ಗ್ರಾಮಸ್ಥರು, ಗ್ರಾಮದೊಳಕ್ಕೆ ಬರೋದನ್ನ ಕಂಡು ಆತಂಕಗೊಂಡಿರೋ ಜನ, ಕಾಡಾನೆ ಸಮಸ್ಯೆಯಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES