Monday, December 23, 2024

ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಸಚಿವರಾಗಿದ್ದ ಮಾಣಿಕ್ ರಾವ್ ಗವಿತ್ ನಿಧನ

ಮುಂಬೈ: 2004 ರ ಯುಪಿಎ ಸರ್ಕಾರದಲ್ಲಿ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದ ಕೇಂದ್ರದ ಮಾಜಿ ಸಚಿವ ಮಾಣಿಕ್‌ರಾವ್‌ ಗವಿತ್ ಅವರು ನಿಧನರಾಗಿದ್ದಾರೆ.

87 ವರ್ಷದ ಮಾಣಿಕ್‌ರಾವ್‌ ಗವಿತ್ ಅವರು ನಾಸಿಕ್‌ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಹಾಗೂ 2013ರಲ್ಲಿ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಅಲ್ಲದೇ, 1980-2009ರ ಅವಧಿಯಲ್ಲಿ ನಂದೂರ್ಬರ್ ಕ್ಷೇತ್ರದಿಂದ 9 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 2014ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಮಾಣಿಕ್‌ರಾವ್‌ ಗವಿತ್ ಅವರ ಪುತ್ರಿ ನಿರ್ಮಲಾ ಗವಿತ್‌ 2009 ಮತ್ತು 2014ರಲ್ಲಿ ಇಗಟ್‌ಪುರಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು. ಅಲ್ಲದೆ, ಎರಡು ಬಾರಿಯೂ ಶಾಸಕಿಯಾಗಿ ಆಯ್ಕೆಯಾಗಿದ್ದರು.

RELATED ARTICLES

Related Articles

TRENDING ARTICLES