Wednesday, January 22, 2025

KPSC ಹುದ್ದೆ ಡೀಲ್​ನಲ್ಲಿ PSI ಲೇಡಿ​​; ಹಣ ನೀಡಿದ ಅಭ್ಯರ್ಥಿ ಬಿಚ್ಚಿಟ್ಟಿದ್ದೇನು?

ವಿಜಯಪುರ: ರಾಜ್ಯದಲ್ಲಿ ಒಂದಿಲ್ಲೊಂದು ಪರೀಕ್ಷಾ ಅಕ್ರಮಗಳು ಬಯಲಿಗೆ ಬರುತ್ತಿದೆ. ಅದರಂತೆ ಇದೀಗ 2020 ರಲ್ಲಿ ನಡೆದ ಕೆಪಿಎಸ್​​ಸಿ ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಹಂಚಿಕೆಯಲ್ಲಿ ಹಣದ ವ್ಯವಹಾರ ನಡೆದಿರುವ ಆಡಿಯೋ ವೈರಲ್ ಆಗಿದೆ.

2020 ರಲ್ಲಿ ನಡೆದ ಕೆಪಿಎಸ್ ಸಿ ಪರಿಯಲ್ಲಿ ನೌಕರಿ ಕೊಡಿಸೋದಾಗಿ 15 ಲಕ್ಷ ಬೇಡಿಕೆವಿಟ್ಟು, ಮುಂಗಡವಾಗಿ 2ಲಕ್ಷ ಪಡೆದಿದ್ದಾರೆ ಎಂದು ಅಭ್ಯರ್ಥಿ ಸಹೋದರ ಸಂಗಮೇಶ ಝಳಕಿ ಆರೋಪಿಸಿದ್ದಾನೆ.

ಬಸವರಾಜ ಝಳಕಿ ಎಫ್ ಡಿಸಿ ಹುದ್ದೆಗೆ ಪರೀಕ್ಷೆ ಬರೆದಿದ್ದರು, ಈ ಆಡಿಯೋದಲ್ಲಿ  ಪಿಎಸ್ಐ ಅವರು ಅಭ್ಯರ್ಥಿಗೆ ಪರೀಕ್ಷೆಯ ಡೀಲ್ ಹೇಗೆಲ್ಲಾ ಆಗುತ್ತೆ ಅಂತ ಹೇಳಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಬಸವರಾಜ ಝಳಕಿ, ಮೈಸೂರಿನ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಆಗಿರುವ ಅಶ್ವಿನಿ ಅನಂತಪುರ ವಿರುದ್ದ ಸಂಗಮೇಶ ಝಳಕಿ ಡೀಲ್​ ವ್ಯವಹಾರ ಬಗ್ಗೆ ಆರೋಪಿಸಿದ್ದಾರೆ.

ಅಶ್ವಿನಿ ಅನಂತಪುರ, ಮೂಲತಃ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದವರಾಗಿದ್ದು, 2021ರಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟ ವೇಳೆ ಆಯ್ಕೆಯಾಗದ ಸಂಗಮೇಶನ ಸಹೋದರ ಅಭ್ಯರ್ಥಿ ಬಸವರಾಜ್ ಡೀಲ್​ ಬಗ್ಗೆ ಮಾತನಾಡಿದ್ದಾನೆ. ಸಂಗಮೇಶ ಸಹೋದರ ಬಸವರಾಜ್ ಝಳಕಿ ಪರಿಕ್ಷೆ ಬರೆದಿದ್ದರು.

ಆಯ್ಕೆಯಾಗದ ಹಿನ್ನಲೆ ಪಿಎಸ್​​ಐಗೆ ಹಣ ಕೇಳಿದ್ದಕ್ಕೆ ತಿರುಗಿ ಬಿದ್ದು ಬೆದರಿಕೆ ಹಾಕುತ್ತಿದ್ದಾರೆ ಅಂತ ಅಭ್ಯರ್ಥಿ ಸಂಗಮೇಶ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES