ಮಧ್ಯಪ್ರದೇಶ : ಭಾರತದಲ್ಲಿ ಆರಂಭವಾಯ್ತು ಚೀತಾ ಯುಗ ಆರಂಭವಾಗಿದ್ದು, ಪ್ರಧಾನಿ ಮೋದಿ ಕುನೋ ಅರಣ್ಯಕ್ಕೆ 8 ಚೀತಾ ಬಿಡುಗಡೆ ಮಾಡಿದ್ದಾರೆ.
ಮಧ್ಯಪ್ರದೇಶದಲ್ಲಿರುವ ಕುನೋ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಿದ್ದು, ರೇಡಿಯೋ ಕಾಲರ್ ಅಳವಡಿಸಿ 8 ಚೀತಾ ರಿಲೀಸ್ ಮಾಡಿದ್ದಾರೆ ಹಾಗೆನೇ 8 ಚೀತಾಗಳನ್ನ ರಿಲೀಸ್ ಮಾಡಿ ಮೋದಿ ಫೋಟೋ ಕ್ಲಿಕ್ಕಿಸಿದ್ದಾರೆ.
ಸುಮಾರು 7 ದಶಕದ ಬಳಿಕ ಭಾರತಕ್ಕೆ ಮತ್ತೆ ಬಂದ ಚೀತಾ, ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಮೀಬಿಯಾದಿಂದ ಭಾರತಕ್ಕೆ ಎಂಟ್ರಿಯಾಯಿತು. 1947ರಲ್ಲಿ ಕೊನೆಯ ಬಾರಿಗೆ ಆಫ್ರಿಕನ್ ಚೀತಾ ಪತ್ತೆಯಾಗಿತ್ತು. ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ಚೀತಾ ಪತ್ತೆಯಾಗಿತ್ತು. 1952ರಲ್ಲಿ ಚೀತಾಗಳ ಸಂತತಿ ಅಳಿದು ಹೋಗಿದೆ ಎಂದು ಘೋಷಣೆ ಮಾಡಲಾಗಿದ್ದು, ಈಗ ಮತ್ತೆ 75 ಕೋಟಿ ಖರ್ಚು ಮಾಡಿ ಆಫ್ರಿಕನ್ ಚೀತಾವನ್ನು ಭಾರತಕ್ಕೆ ತಂದಿದ್ದಾರೆ.