ಮಂಡ್ಯ : ಮಂಡ್ಯದ ಪಾಳು ಬಾವಿಯಲ್ಲಿ ನವಜಾತ ಶಿಶು ಪತ್ತೆಯಾದ ಘಟನೆ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ.
ನಗರದ 30 ಅಡಿ ಪಾಳು ಬಾವಿಗೆ ಶಿಶು ಎಸೆದು ಹೋಗಿರೋ ದುಷ್ಕರ್ಮಿಗಳು, ದಾರಿಯಲ್ಲಿ ಹೋಗುವವರ ಕಿವಿಗೆ ಶಿಶುವಿನ ಆಕ್ರಂದನ ಕೇಳಿದೆ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನವಜಾತ ಶಿಶು ರಕ್ಷಣೆ ಮಾಡಿದ್ದಾರೆ.
ಇನ್ನು, ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದೆ. ಪಾಳು ಬಾವಿಯಲ್ಲಿ ಬಿದ್ದಿದ್ದರೂ ಪವಾಡ ಸದೃಶ್ಯ ರೀತಿ ಶಿಶು ಪಾರಾಗಿದ್ದು, ಆಗ ತಾನೇ ಜನಿಸಿರುವ ಗಂಡು ಮಗವನ್ನು ಎಸೆದಿರುವ ದುಷ್ಕರ್ಮಿಗಳು, ಮಹಾತಾಯಿ ಕೃತ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಶಿಶುವಿನ ದೇಹದ ಕೆಲವು ಭಾಗಗಳಲ್ಲಿ ಇರುವೆಗಳು ಕಚ್ಚಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.