Sunday, January 19, 2025

ಮಹಿಳೆ ಹೊಟ್ಟೆಯಲ್ಲಿ 4 ಕೆಜಿ ಗೆಡ್ಡೆ; ಯಶಸ್ವಿಯಾಗಿ ಹೊರ ತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು

ಶಿವಮೊಗ್ಗ: ಮಹಿಳೆ ಹೊಟ್ಟೆಯಲ್ಲಿ 4 ಕೆಜಿಯಷ್ಟು ದೊಡ್ಡ ಗೆಡ್ಡೆಯನ್ನ ಹೊರ ತೆಗೆಯುವಲ್ಲಿ ತೀರ್ಥಹಳ್ಳಿ ವೈದ್ಯರು ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಭದ್ರಾವತಿಯ ಶಾರದಮ್ಮ (65) ಎಂಬುವರು ತೀವ್ರ ಹೊಟ್ಟೆ ನೋವುನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಹೋದ ವೇಳೆಯಲ್ಲಿ ಸುಮಾರು 4 ಕೆಜಿಯಷ್ಟು ಗೆಡ್ಡೆ ಪತ್ತೆಯಾಗಿದೆ.

ಈ ಗಡ್ಡೆ ಇಲ್ಲಿಯವರೆಗೆ ಶಾರದಮ್ಮನಿಗೆ ಯಾವುದೇ ತೊಂದರೆ ಇರಲಿಲ್ಲ. ವಯಸ್ಸಾದ ಹಿನ್ನೆಲೆ ಬೇರೆಡೆ ಗೆಡ್ಡೆ ತೆಗೆಯಲು ವೈದ್ಯರು ಒಪ್ಪದಿದ್ದಾಗ, ಪೋಷಕರ ಒತ್ತಾಯ ಮೇರೆಗೆ ಬೃಹತ್ ಗೆಡ್ಡಯನ್ನು ತೀರ್ಥಹಳ್ಳಿ ವೈದ್ಯರು ಹೊರ ತೆಗೆದಿದ್ದಾರೆ. ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಜಯಚಾಮರಾಜೇಂದ್ರ ಆಸ್ಪತ್ರೆ ವೃದ್ಯರ ಸಾಧನೆಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES