Thursday, December 26, 2024

ಮಗನ ಪ್ರೀತಿ ಪೋಷಕರ ಫಜೀತಿ

ವಿಜಯಪುರ : ಪ್ರೇಮಿಗಳ ಓಡಿ ಹೋಗಿದಕ್ಕೆ ತಂದೆ ತಾಯಿಗಳ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಜಾಲಗೇರಿ‌ ಗ್ರಾಮದಲ್ಲಿ ನಡೆದಿದೆ.

ತಂದೆ,‌ ತಾಯಿ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಪ್ರೇಮಿಗಳಾದ ಅಮರ್ ಚವ್ಹಾಣ (24) ಅರ್ಚನಾ ಪವ್ಹಾರ (22) ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ನಮ್ಮ ತಂದೆ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಕುಟುಂಬದವರನ್ನು ರಕ್ಷಣೆ ಮಾಡಿ ಎಂದು ಅಮರ್ ಹಾಗೂ ಅರ್ಚನಾ ಮನವಿ ಮಾಡಿದ್ದಾರೆ.

ಇನ್ನು, ನಾನು ಪ್ರೀತಿಸಿದ ಹುಡುಗನ ಜೊತೆಗೆ ಬಂದಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ ಅರ್ಚನಾ. ಎರಡು ದಿ‌ನಗಳ ಹಿಂದೆ ಸೆಪ್ಟೆಂಬರ್ 11 ರಂದು ಹಲ್ಲೆ ಮಾಡಿದ್ದ ಅರ್ಚನಾ ಕುಟುಂಬ. ಅಮರ್ ತಂದೆ ಗೋರಖನಾಥ್ ಚೌಹಾಣ್, ತಾಯಿ ಕವಿತಾ ಮೇಲೆ ನಡೆದಿದ್ದ ಹಲ್ಲೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES