204 ದಿನಗಳಾದ್ರೂ ಮುಗಿದಿಲ್ಲ ರಷ್ಯಾ-ಉಕ್ರೇನ್ ನಡುವಿನ ಯುದ್ಧ.. ರಾಷ್ಯ ಅದ್ಯಾವಾಗ ಉಕ್ರೇನ್ ಮೇಲೆ ಯುದ್ಧ ಸಾರಿತೋ ಅಂದಿನಿಂದಲೇ ವೈಯಕ್ತಿಕ ದ್ವೇಷ ಕೂಡ ಹೆಚ್ಚಾಗುತ್ತಲೇ ಹೋಗಿತ್ತು. ಒಂದ್ಕಡೆ, ಝೆಡ್ ನಂಬರ್ ಇರುವ ಯುದ್ಧ ಟ್ಯಾಂಕರ್‌ಗಳು ಫೀಲ್ಡಿಗಿಳಿದಿದ್ವು. ಝೆಲೆನ್ಸ್‌ಕೀ ಹತ್ಯೆ ಮಾಡುವ ಮೂಲಕ ರಷ್ಯಾ ಪಡೆಗಳು ಸೇಡಿಗೆ ನಿಂತಿದ್ವು. ಆದ್ರೆ, ಪುಟ್ಟ ರಾಷ್ಟ್ರ ಆದ್ರೂ, ಪ್ರಬಲ ರಷ್ಯಾ ವಿರುದ್ಧ ಸೆಟೆದು ನಿಂತ ಉಕ್ರೇನ್ ವಿ ಸಿಂಬಲ್‌ನ ಟ್ಯಾಂಕರ್‌ಗಳನ್ನು ಫೀಲ್ಡಿಗಳಿಸಿತ್ತು. ಇದ್ರ ಅರ್ಥ ವ್ಲಾಡಿಮಿರ್ ಪುಟಿನ್ ಕೊನೆಗಾಣಿಸುವ ಎಚ್ಚರಿಕೆ ಸಂದೇಶವಾಗಿತ್ತು.. ಈ ಹರಸಾಹಸ ಇಂದಿಗೂ ಮುಂದುವರೆದಿದೆ.. ಇದರ ಬೆನ್ನಲ್ಲೇ ಶಾಕಿಂಗ್ ನ್ಯೂಸ್ ಬಂದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಮಹಾ ಸ್ಕೆಚ್ ಸ್ಪಲ್ಪದರಲ್ಲೇ ಮಿಸ್ ಆಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದ್ದ ಕಾರಿನ ಮೇಲೆ ಏಕಾಏಕಿ ಅಪರಿಚಿತರು ದಾಳಿ ಮಾಡಿದ್ದಾರೆ. ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪುಟಿನ್ ಪಾರಾಗಿದ್ದಾರೆ. ಹತ್ಯೆಗೆ ಯತ್ನಿಸಿದ ಕೆಲವರನ್ನು ಬಂಧಿಸಿದ್ದು ವಿಚಾರಣೆ ನಡೆಸಲಾಗ್ತಿದೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ಪುಟಿನ್ ಮೇಲೆ ತವರು ದೇಶದಲ್ಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ಇಂತಹ ಸನ್ನಿವೇಶದಲ್ಲೇ ಹತ್ಯೆ ಮಾಡಲು ಅಪರಿಚಿತರು ಮುಂದಾಗಿದ್ದಾರೆ. ಆದ್ರೆ, ಸಂಚು ವಿಫಲವಾಗಿದೆ. ಇದೇ ಮೊದಲಲ್ಲ ಇದು ಎರಡನೇ ಮರ್ಡರ್ ಅಟೆಂಮ್ಟ್.
ಒಂದ್ಕಡೆ, ರಷ್ಯಾ ಅಧ್ಯಕ್ಷ ಹತ್ಯೆಗೆ ಸ್ಕೆಚ್ ಮಿಸ್ ಆಗಿದ್ರೆ, ಇತ್ತ ಭೀಕರ ಅಪಘಾತದಿಂದ ಪಾರಾಗಿ ಬಂದಿದ್ದಾರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ ಕೀ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ತನಿಖೆ ನಡೆಸೋದಾಗಿ ಝೆಲೆನ್ಸ್‌ಕೀ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ಪುಟಿನ್ ಹತ್ಯೆಗೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಭಾರಿ ಭದ್ರತೆಯಿಂದ ಇದು ಸಾಧ್ಯವಾಗಿಲ್ಲ. ಆದ್ರೆ, ಪುಟಿನ್ ಆಪ್ತರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ವ್ಲಾದಿಮಿರ್ ಪುಟಿನ್ ಮೆದುಳು ಎಂದೇ ಗುರುತಿಸಿಕೊಂಡಿದ್ದಅಲೆಕ್ಸಾಂಡರ್ ಗೆಲಿವಿಚ್ ಡುಗಿನ್ ಪುತ್ರಿ ದರಿಯಾ ಡುಗಿನ್ ರವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ದರಿಯಾ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಮಾಸ್ಕೋ ಹೊರವಲಯದಲ್ಲಿ ಈ ಘಟನೆ ನಡೆದಿತ್ತು.
ರಷ್ಯಾದ ಖ್ಯಾತ ತತ್ವಜ್ಞಾನಿ, ರಾಜಕೀಯ ತಂತ್ರಗಾರ, ಅಲೆಕ್ಸಾಂಡರ್ ಗೆಲಿವಿಚ್ ಡುಗಿನ್ ಅವರ ಪುತ್ರಿಯ ಸಾವಿನಿಂದ ಪುಟಿನ್ ಕಂಗೆಟ್ಟಿದ್ದಾರೆ. ತನ್ನ ನಿರ್ಧಾರಗಳನ್ನು ಪ್ರತಿ ಹಂತದಲ್ಲೂ ದರಿಯಾ ಡುಗಿನ್ ಬೆಂಬಲಿಸಿದ್ರು. ಉಕ್ರೇನ್ ಯುದ್ಧವನ್ನು ಬೆಂಬಲಿಸಿ ವೇದಿಕೆಗಳ ಮೇಲೆ ಮಾತಾಡಿದ್ರು. ಅದೇ ದ್ವೇಷ ಇಟ್ಕೊಂಡು ಮಗಳನ್ನು ಕೊಂದಿದ್ರು. ಇದೀಗ, ಮತ್ತೆ ಪುಟಿನ್ ಮೇಲೆ ಹತ್ಯೆಗೆ ಪ್ರಯತ್ನ ಮಾಡಲಾಗಿದೆ.
ಹೌದು, ಹಠಕ್ಕೆ ಬಿದ್ದಿರುವ ಪುಟಿನ್ ಮತ್ತು ಝೆಲೆನ್ಸ್ ಕೀ ಯುದ್ಧದಿಂದ ಹಿಂದೆ ಸರಿಯುವ ಮಾತೇ ಆಡ್ತಿಲ್ಲ. ಈ ಮಧ್ಯೆ, ರಷ್ಯಾ ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶಗಳನ್ನು ವಶಕ್ಕೆ ಪಡೆದುಕೊಳ್ಳುವ ಪ್ರಯತ್ನ ಉಕ್ರೇನ್ ಮಾಡುತ್ತಿದೆ. ಸಿಕ್ಕಾಪಟ್ಟೆ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡಿಕೊಂಡಿರುವ ಉಕ್ರೇನ್ ಪಡೆಗಳು ಪ್ರಬಲ ಪೈಪೋಟಿ ನೀಡ್ತಿವೆ. ಹೀಗಾಗಿ, ರಷ್ಯಾ ಸೇನೆ ಹಿಂದಕ್ಕೆ ಓಡ್ತಿದೆ. ಇದೀಗ 204 ದಿನಗಳಾದ್ರೂ ಉಕ್ರೇನ್ ಬಲ ಕುಂದಿಲ್ಲ. ಈ ಮಧ್ಯೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಮಹಾ ಸ್ಕೆಚ್ ವಿಫಲವಾಗಿದೆ.