ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಪಿಎಸ್‌ಐ ಹಗರಣದ ತನಿಖೆ ವಿಚಾರ ಸದ್ದುಗದ್ದಲಕ್ಕೆ ಕಾರಣವಾಯ್ತು. ನಿಯಮ ೬೦ ರಡಿ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಡಿಮ್ಯಾಂಡ್ ಮಾಡಿದ್ರು. ಸಿದ್ದರಾಮಯ್ಯಗೆ ಪ್ರತಿಪಕ್ಷ ಸದಸ್ಯರು ಸಹ ಧ್ವನಿ ಗೂಡಿಸಿದ್ರು. ಆದ್ರೆ, ಸರ್ಕಾರದ ಕಡೆಯಿಂದ ತೀರ್ವ ವಿರೋಧ ವ್ಯಕ್ತವಾಯ್ತು. ಪ್ರಕರಣ ಕೋರ್ಟ್ ನಲ್ಲಿ ಇರೋದ್ರಿಂದ ಇಲ್ಲಿ ಚರ್ಚೆ ಮಾಡೋಕೆ ಬರಲ್ಲವೆಂದು ಕಾನೂನು ಸಚಿವ ಮಾಧುಸ್ವಾಮಿ ಡಿಫೆಂಡ್ ಮಾಡಿಕೊಂಡ್ರು. ಆದ್ರೆ, ಪಟ್ಟು ಬಿಡದ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಕಥೆ ಏನಾಗ್ಬೇಕು. ಸಮಗ್ರ ಚರ್ಚೆಯಾದ್ರೆ ತಾನೇ ಎಲ್ಲಾ ಹುಳುಕು ಹೊರಗೆ ಬರೋದು.. ಮೊದಲು ಚರ್ಚೆಗೆ ಅವಕಾಶ ಕೊಡಿ. ಹಿಂದೆ ಡಿ.ಕೆ.ರವಿ ಹಾಗೂ ಡಿವೈಎಸ್‌ಪಿ ಗಣಪತಿ ಪ್ರಕರಣ ಕೋರ್ಟ್‌ನಲ್ಲಿದ್ದಾಗಲೇ ಇಲ್ಲಿ ಚರ್ಚೆ ಮಾಡಿಲ್ವೇ. ಈಗೇನು ಹೊಸ ಅವತಾರ ಅಂತ ಗುಡುಗಿದ್ರು. ಈ ವೇಳೆ ಸದನದಲ್ಲಿ ಸದ್ದುಗದ್ದಲ ಜೋರಾಯ್ತು.
ಇನ್ನು ಪಿಎಸ್ ಐ ಹಗರಣದ ಚರ್ಚೆಗೆ ಕಾಂಗ್ರೆಸ್ ಪಟ್ಟಿನಿಂದಾಗಿ ಸಚಿವ ಅಶ್ವಥ್ ನಾರಾಯಣ್ ಸ್ವಲ್ಪ ಗಲಿಬಿಲಿಗೊಳಗಾದ್ರು. ಚರ್ಚೆಗೆ ಅವಕಾಶ ನೀಡಲು ಬರೋದಿಲ್ಲ ಅಂತ ಮಾಧುಸ್ವಾಮಿ ಬೆಂಬಲಕ್ಕೆ ಬಂದ್ರು. ಈ ವೇಳೆ ನೀನು ಸಂಬಂಧಿಸಿದ ಸಚಿವನೇನಪ್ಪಾ ಅಶ್ವಥ್ ನಾರಾಯಣ್, ಕಾನೂನು ಸಚಿವರು ಉತ್ತರ ಕೊಡ್ತಾರೆ ಕೂತ್ಕೋ ಅಂತ ದಬಾಯಿಸಿದ್ರು. ಅಶ್ವಥ್ ಸುಮ್ಮನೆ ಕುಳಿತ್ರು. ಮಾಧುಸ್ವಾಮಿ ಮತ್ತೆ ಚರ್ಚೆಗೆ ಅವಕಾಶ ಇಲ್ಲ ಅನ್ನೋದನ್ನ ಒತ್ತಿ ಹೇಳುವ ಪ್ರಯತ್ನ ಮಾಡಿದ್ರು. ಆದ್ರೆ ಸಿದ್ರಾಮಯ್ಯ ಮಾತ್ರ ಪಟ್ಟು ಬಿಡಲಿಲ್ಲ. ಕೊನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆಗೆ ಅವಕಾಶ ಕೊಡುವ ಭರವಸೆ ನೀಡಿದ್ರು.
ಇನ್ನು ಕಾಂಗ್ರೆಸ್ ಪಟ್ಟಿಗೆ ಮಣಿದಿರುವ ಸರ್ಕಾರ ಹಗರಣದ ಚರ್ಚೆಗೆ ಅವಕಾಶ ನೀಡಲು ಒಪ್ಪಿದೆ. ಆದ್ರೆ, ಕೆಲವು ಷರತ್ತುಗಳನ್ನೂ ಇಟ್ಟಿದೆ. ಹಿಂದಿನ ಸರ್ಕಾರದಲ್ಲಿ ಆಗಿರುವ ನೇಮಕಾತಿ ಅಕ್ರಮಗಳನ್ನೂ ಚರ್ಚೆಗಿಡುವುದಾಗಿ ಹೇಳಿದೆ..ಅದಕ್ಕೆ ಸಿದ್ದರಾಮಯ್ಯ ಕೂಡ ಒಪ್ಪಿದ್ದಾರೆ. ನೀವು ಯಾವುದೇ ವಿಚಾರಗಳನ್ನೂ ಬೇಕಾದ್ರೂ ತನ್ನಿ, ನಮ್ಮ ಕಾಲದ ಹಗರಣಗಳನ್ನೂ ತನ್ನಿ ನಾವು ಚರ್ಚೆ ಮಾಡೋಕೆ ರೆಡಿ ಅಂತ ತೊಡೆತಟ್ಟಿದ್ದಾರೆ.
ಒಟ್ನಲ್ಲಿ ಪಿಎಸ್‌ಐ ನೇಮಕಾತಿ ಹಗರಣದ ಚರ್ಚೆಗೆ ಸರ್ಕಾರ ಸುಲಭವಾಗಿ ಒಪ್ಪಲ್ಲವೆಂಬ ಮಾತುಗಳಿದ್ವು. ಆದ್ರೆ, ಕಾಂಗ್ರೆಸ್ ಪಟ್ಟಿಗೆ ಸರ್ಕಾರ ಮಣಿದಿದೆ. ಬೇರೊಂದು ಮಾದರಿಯಲ್ಲಿ ಪ್ರತಿಪಕ್ಷಗಳ ಬಾಯಿ ಮುಚ್ಚಬಹುದೆಂಬ ಕಾರಣಕ್ಕೆ ಒಪ್ಪಿಕೊಂಡಿದೆ. ಹಿಂದಿನ ಹಗರಣಗಳನ್ನ ಕೆದಕೋಕೆ ಪ್ಲಾನ್ ಹಾಕಿಕೊಂಡಿದೆ. ಇತ್ತ ಕಾಂಗ್ರೆಸ್ ಕೂಡ ಸರ್ಕಾರದ ಡ್ಯಾಮೇಜ್ ಗೆ ಸಿದ್ಧವಾಗಿಯೇ ನಿಂತಿದೆ. ಮುಂದಿನ ಚರ್ಚೆ ಯಾರ ಕೈ ಮೇಲಾಗಲಿದೆ. ಯಾರದ್ದು ಕೆಳಗೆ ಬೀಳಲಿದೆ. ಯಾರಿಗೆ ಮುಜುಗರ ಎಲ್ಲವೂ ಬಟಾಬಯಲಾಗಲಿದೆ.
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು