ನವದೆಹಲಿ : ನಾಳೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ವಿನೂತನವಾಗಿ ಬರ್ತ್ಡೇ ಸೆಲೆಬ್ರೇಷನ್ ಮಾಡಲು ಮುಂದಾಗಿದ್ದಾರೆ.
ದೆಹಲಿಯ ರೆಸ್ಟೋರೆಂಟ್ ಒಂದು ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆ ವಿಜೇತರಿಗೆ 8.5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಹೌದು ದೆಹಲಿಯ ಕೋನಟ್ ಪ್ಲೇಸ್ ಎಂಬಲ್ಲಿನ ರೆಸ್ಟೋರೆಂಟ್ನಲ್ಲಿ 56 ಖಾದ್ಯಗಳನ್ನು ಹೊಂದಿರುವ ಊಟವನ್ನು ಕೊಡಲಾಗುತ್ತದೆ. ಈ ಊಟವನ್ನು ಯಾರು 40 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತಾರೋ ಅವರಿಗೆ 8.5 ಲಕ್ಷ ಹಣವನ್ನು ಬಹುಮಾನವಾಗಿ ಕೊಡಲಾಗುತ್ತೆ.
ರೆಸ್ಟೋರೆಂಟ್ ಮಾಲೀಕ ಸುಮಿತ್ ಕಲ್ರಾ ಎಂಬುವವರು ಈ ಘೋಷಣೆ ಮಾಡಿದ್ದು, ಊಟಕ್ಕೆ 56 ಇಂಚ್ ಮೋದಿಜಿ ಥಲಿ ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಸ್ಪರ್ಧೆ ಸೆಪ್ಟೆಂಬರ್ 17ರಿಂದ ಸೆಪ್ಟೆಂಬರ್ 26ರ ತನಕ ಇರಲಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಕೇಧಾರನಾಥಕ್ಕೆ ತೆರಳಲು ಉಚಿತ ಟಿಕೆಟ್ ನೀಡಲಾಗುತ್ತೆ.