ಮೈಸೂರು : ಬಹು ಮತದಿಂದ ಅಂಗೀಕಾರವಾದ ವಿಧೇಯಕವನ್ನು ಕಾಂಗ್ರೆಸ್ ಹರಿದು ಹಾಕಿ ಅವಮಾನ ಮಾಡಿದೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಟ್ಟ ಕುರುಬ ಸಮುದಾಯ ಎಸ್.ಟಿ. ಗೆ ಸೇರ್ಪಡೆಗೆ ದೊಡ್ಡ ಹೋರಾಟವಾಗಿತ್ತು. ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ಹಿಂದುಳಿದ ವರ್ಗಗಳ ಆನೇಕ ಜಾತಿಗಳಿವೆ. ಕುಲಶಾಸ್ತ್ರ ಅಧ್ಯಯನ ಬೇಗ ಮುಗಿಸಿ ಎಲ್ಲಾ ಅರ್ಹರಿಗೂ ಮೀಸಲಾತಿ ನೀಡಬೇಕು. ಶ್ರೀಮಂತರಿಗೆ ಇನ್ನೂ ಮೀಸಲಾತಿ ಸೌಲಭ್ಯ ಸಿಗುತ್ತದೆ. ಕಡು ಬಡವರಿಗೆ ಮಾತ್ರ ಮೀಸಲಾತಿ ನೀಡಿ ಎಂದು ಅಭಿಪ್ರಾಯಪಟ್ಟರು.
ಮತಾಂತರ ನಿಷೇಧ ವಿಧೇಯಕದ ಅಂಗೀಕಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಸೆ, ಆಮಿಷ ತೋರಿಸಿ ಮತಾಂತರ ನಡೆಯುತ್ತಿದೆ. ಮತಾಂತರ ನಿಷೇಧ ವಿಧೇಯಕ ಚರಿತ್ರಾರ್ಹ ವಿಧೇಯಕ, ಬಹು ಮತದಿಂದ ಅಂಗೀಕಾರವಾದ ವಿಧೇಯಕವನ್ನು ಕಾಂಗ್ರೆಸ್ ಹರಿದು ಹಾಕಿ ಅವಮಾನ ಮಾಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೆಚ್ಚಿಸಲು ಕಾಂಗ್ರೆಸ್ ಈ ನಡವಳಿಕೆ ಪ್ರದರ್ಶಿಸಿದೆ ಎಂದರು.
ಇನ್ನು, ಕಾಂಗ್ರೆಸ್ ಭಾರತ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಖಂಡ ಭಾರತವನ್ನು ತುಂಡು ಮಾಡಿದವರು ಕಾಂಗ್ರೆಸಿಗರು. ಪಾಕಿಸ್ತಾನಾ, ಹಿಂದೂಸ್ತಾನ ಒಡೆದವರು ಕಾಂಗ್ರೆಸಿಗರು, ಪಾಕಿಸ್ತಾನ – ಹಿಂದೂಸ್ತಾನಾ ಬೇರೆ ಬೇರೆಯಾಗಿರಬಾರದು, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಆತ್ಮಕ್ಮೆ ಶಾಂತಿ ಸಿಗಬೇಕಾದರೆ ಪಾಕಿಸ್ತಾನ – ಹಿಂದೂಸ್ತಾನ ಒಂದಾಗಬೇಕು, ಹಿಂದೆ ಮಾಡಿದ ತಪ್ಪಿಗೆ ಈಗ ಪ್ರಾಶಸ್ತಾಪವಾಗಿ ಕಾಂಗ್ರೆಸ್ ಭಾರತ ಜೋಡೋ ಯಾತ್ರೆ ಮಾಡ್ತಿದೆ ಎಂದು ಹೇಳಿದರು.
ಅದಲ್ಲದೇ, ಡಿಕೆಶಿ ಮನೆಗಳ ಮೇಲೆ ಇಡಿ ದಾಳಿ ಮಾಡಿದ್ದಾ ಬಂಡಲ್ ಗಟ್ಟಲೆ ಹಣ ಸಿಕ್ಕಿತ್ತು. ಅದನ್ನು ಜನ ನೋಡಿದ್ದಾರೆ. ಕಳ್ಳತನ ಮಾಡಿದ ಕಳ್ಳ ನಾನು ಯಾವುದೋ ಸಂದರ್ಭದಲ್ಲಿ ಇದ್ದಿನಿ. ನನ್ನ ಬಂಧಿಸಬೇಡಿ. ನೋಟೀಸ್ ಕೊಡಬೇಡಿ ಎಂದು ಹೇಳಿದಂತಿದೆ. ಇಡಿ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವಂತಹ ಡಿಕೆಶಿ ಹೇಳಿಕೆ ಅವರಿಗೆ ಶೋಭೆ ತರಲ್ಲ. ಡಿಕೆಶಿ ನಿರಾಪರಾಧಿಯಾಗಿ ಹೊರ ಬಂದರೆ ಸಂತೋಷ, ಆದರೆ, ಈಗ ಡಿಕೆಶಿ ಜಾಮೀನಿನ ಮೇಲೆ ಇರುವ ಜನ. ಸಿಕ್ಕು ಬಂದಿರೋ ಅಪರಾಧಿ. ಡಿಕೆಶಿ ಹೇಳಿಕೆ ರಾಜಕೀಯ ದೊಂಬರಾಟದಂತಿದೆ. ಇಡಿ ಮೇಲೆ ಡಿಕೆಶಿ ಮಾಡಿರುವ ಆರೋಪದ ಹೇಳಿಕೆಯನ್ನು ಅವರು ವಾಪಾಸ್ ಪಡೆಯಬೇಕು ಎಂದರು.