Thursday, January 23, 2025

ಪ್ರೀತಿ ನಿರಾಕರಿಸಿ ಬೇರೊಬ್ಬರ ಜೊತೆ ಮದುವೆ ಆಗಿದ್ದಕ್ಕೆ ಕೊಲೆ

ದೇವನಹಳ್ಳಿ : ಪ್ರೀತಿ ನಿರಾಕರಿಸಿ ಬೇರೊಬ್ಬರ ಜೊತೆ ಮದುವೆ ಆಗಿದ್ದಕ್ಕೆ ಕೊಲೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ.

ಸೌಮ್ಯಾ (23) ಕೊಲೆಯಾದ ನವ ವಿವಾಹಿತೆ, ಸುಬ್ರಮಣ್ಯ (24) ಕೊಲೆ ಮಾಡಿ ಪರಾರಿ ಆಗಿರುವ ಯುವಕ, ನಿನ್ನೆ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಸುಬ್ರಮಣ್ಯ, ಈ ಹಿಂದೆ ಸೌಮ್ಯಾ ಮತ್ತು ಸುಬ್ರಹ್ಮಣ್ಯ ಪ್ರೀತಿಸುತ್ತಿದ್ದರು.

ಇನ್ನು, 15 ದಿನಗಳ ಹಿಂದೆ ಸೌಮ್ಯಾ ಬೇರೊಬ್ಬರ ಜೊತೆ ಮದುವೆ ಆಗಿದ್ದಳು, ನಿನ್ನೆ ಹುಟ್ಟೂರು ಆವತಿ ಗ್ರಾಮಕ್ಕೆ ಸೌಮ್ಯಾ ಬಂದಿದ್ದ ವೇಳೆ ಕೊಲೆ ಮಾಡಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಿಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES