Monday, December 23, 2024

ಅಧಿಕ ಮಳೆಯಿಂದ ಅಡಿಕೆ ಬೆಳೆ ಜಲಾವೃತ

ದಾವಣಿಗೆರೆ : ಜಿಲ್ಲೆಯಲ್ಲಿಯೂ ಮಳೆ ನಿರಂತರ ಸುರಿಯುತ್ತಿದ್ದು ಅಡಿಕೆ ತೋಟಗಳು ಜಲಾವೃತಗೊಂಡಿವೆ. ಕೆರೆಯ ಹಿನ್ನೀರಿನಲ್ಲಿ ಅಡಿಕೆ ತೋಟಗಳು ಮುಳುಗಿವೆ.

ಕೆರೆಯಾಗಳಹಳ್ಳಿ ಅಡಿಕೆ ತೋಟವು ಸಂಪೂರ್ಣ ಜಲಾವೃತಗೊಂಡಿದೆ. ಅಣಜಿ ಕೆರೆಯು ಭರ್ತಿಯಾಗಿದ್ದು ಹಿನ್ನೀರಿನಲ್ಲಿ ಸುಮಾರು 300 ಎಕರೆ ಅಡಿಕೆ ತೋಟಗಳು ಜಲಾವೃತಗೊಂಡಿವೆ. ರೈತರು ತೆಪ್ಪ ಬಳಸಿ ಅಡಿಕೆ‌ ಕೊಯ್ಲು ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ, ನೀರಾವರಿ ಇಲಾಖೆ ಕಚೇರಿಗೆ ಮನವಿ ಮಾಡಿದ್ರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪ ಮಾಡ್ತಿದ್ದಾರೆ. ನಮ್ಮ ಅಡಿಕೆ ತೋಟ ಉಳಿಸಿಕೊಡಿ ಎಂದು ರೈತರು ಸರ್ಕಾರಕ್ಕೆ ಮನವಿ ಮಾಡ್ತಿದ್ದಾರೆ.

RELATED ARTICLES

Related Articles

TRENDING ARTICLES