Sunday, December 22, 2024

ಅಂಜನಾದ್ರಿಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ

ಕೊಪ್ಪಳ : ರಾಜ್ಯ ಸರಕಾರ ಹನುಮನ ಜನ್ಮ ಸ್ಥಳ ಅಂಜನಾದ್ರಿಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದೆ. ಆಗಷ್ಟ್ 1 ರಂದು ಸಿಎಂ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಅಭಿವೃದ್ದಿಗಾಗಿ 130 ಕೋಟಿ ರೂಪಾಯಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಅಂಜನಾದ್ರಿಗೆ ಹೋಗಿ ಬರುವವರಿಗಾಗಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರ 400 ಕೋಟಿ ರೂಪಾಯಿಯ ಯೋಜನೆ ಸಿದ್ದಪಡಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 50 ರ ಹಿಟ್ನಾಳ್ ಕ್ರಾಸ್ ನಿಂದ ಗಂಗಾವತಿ ನಗರದವರೆಗೂ ಒಟ್ಟು 30.90 ಕಿಮೀ ದೂರದ ರಸ್ತೆಯನ್ನು ಚತುಷ್ಪಥ ರಸ್ತೆ ಮಾಡಲು ಸುಮಾರು 150 ಅಡಿ ಅಗಲ ರಸ್ತೆಗಾಗಿ ಯೋಜನೆ ಸಿದ್ದಪಡಿಸಲಾಗಿದೆ. ಈ ನಿಟ್ಟಿನಲ್ಲಿ ನೂರಾರು ಎಕರೆ ಪ್ರದೇಶವನ್ನು ಸರಕಾರ ಸ್ವಾದೀನ ಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಈ ರಸ್ತೆಯು ತುಂಗಭದ್ರ ಎಡದಂಡೆ ನಾಲೆಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶವಾಗಿದೆ. ಅಲ್ಲದೆ, ವಿಜಯನಗರ ಅರಸರ ಕಾಲದಿಂದಲೂ ಈ ಪ್ರದೇಶ ನೀರಾವರಿ ಪ್ರದೇಶವಾಗಿದೆ. ಇಲ್ಲಿ ಭತ್ತ, ಬಾಳೆ ಸೇರಿ ವಿವಿಧ ಬೆಳೆಯನ್ನು ಬೆಳೆಯುತ್ತಿದ್ದಾರೆ. ಬಹಳಷ್ಟು ರೈತರು ಕೃಷಿಯನ್ನೆ ನಂಬಿಕೊಂಡಿದ್ದಾರೆ, ಈ ರೈತರು ನಾವು ಅಭಿವೃದ್ದಿಗೆ ವಿರೋಧಿಸುತ್ತಿಲ್ಲ. ಆದರೆ, ಫಲವತ್ತಾದ ನಮ್ಮ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳುವ ಮುನ್ನ ಪ್ರತಿ ಎಕರೆಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈಗ ಚತುಷ್ಪೃಥ ರಸ್ತೆಯ ನಿರ್ಮಾಣಕ್ಕಾಗಿ ಸಮಿಕ್ಷೆ ಆರಂಭವಾಗಿದೆ.

ಎಲ್ಲವೂ ಸರಿಯಾದ ಸಮಯಕ್ಕೆ ನಡೆದರೆ ಈ ಡಿಸೆಂಬರ್ ಅಂತ್ಯಕ್ಕೆ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ. ಈ ಮಧ್ಯೆ ರೈತರು ಸರಕಾರ ನೀಡುವ ಪರಿಹಾರ ಎಷ್ಟು ಎಂಬುದನ್ನು ಎದುರು ನೋಡುತ್ತಿದ್ದಾರೆ.

ಶುಕ್ರಾಜ್ ಕುಮಾರ್ ಪವರ್ ಟಿವಿ ಕೊಪ್ಪಳ

RELATED ARTICLES

Related Articles

TRENDING ARTICLES