Tuesday, November 5, 2024

ವಿದ್ಯುತ್ ಕಡಿತದಿಂದ 4 ರೋಗಿಗಳು ಸಾವು; ತನಿಖೆಗೆ ಆರೋಗ್ಯ ಸಚಿವ ಆದೇಶ

ಬಳ್ಳಾರಿ: ಇತ್ತೀಚಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸ್ಥಗಿತದಿಂದ ನಾಲ್ಕು ರೋಗಿಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ತನಿಖೆಗೆ ಆದೇಶಿಸಿದ್ದಾರೆ.

ವಿಮ್ಸ್ ದುರಂತದ ಬಗ್ಗೆ ಪವರ್ ಟಿವಿ ಮೊದಲ ವರದಿ ಪ್ರಸಾರ ಮಾಡಿತ್ತು. ದುರಂತದ ಬಳಿಕ ಕೊನೆಗೂ ಎಚ್ಚೆತ್ತುಕೊಂಡ ಈಗ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಡಾ. ಸ್ಮಿತಾ ನೇತೃತ್ವದಲ್ಲಿ ಐವರ ಸಮಿತಿ ರಚನೆ ಮಾಡಿ ತನಿಖೆ ನಡೆಸುವಂತೆ ಸಮಿತಿ ರಚನೆ ಮಾಡಿದ್ದಾರೆ. ಅಲ್ಲದೇ, ತುರ್ತಾಗಿ ದುರಂತದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸ್ಥಗಿತವಾಗಿ ಆಕ್ಸಿಜನ್ ನಲ್ಲಿದ್ದ ಮೂವರು ಮೃತ ಪಟ್ಟಿದ್ದರು ಆದರೆ, ಸಾವನ್ನಪ್ಪಿದ್ದು ಮೂವರು ನಾಲ್ವರು. ಆದರೆ ಅದೇ ದಿನ ಮನೋಜ್(18) ಎಂಬ ಯುವಕನ ಸಾವೀಗಿಡಾಗಿದ್ದಾನೆ. ಮೃತ ಮನೋಜ್ ನನ್ನ ಪೋಷಕರಿಗೆ ತಿಳಿಸದೇ ಬೇರೆ ವಾರ್ಡ್ ಗೆ ವಿಮ್ಸ್ ಸಿಬ್ಬಂದಿಗಳು ಶಿಫ್ಟ್ ಮಾಡಿದ್ದಾರೆ ಎಂದು ಪೋಷಕರು ಇಂದು ಆಕ್ರೋಶ ವ್ಯಕ್ತಪಡಿಸಿದರು.

ಸೆ 12 ರಂದು ವಿದ್ಯುತ್ ಸ್ಥಗಿತ ಈ ವೇಳೆ ಮನೋಜ್ ಕೂಡ ಮೃತವಾಗಿದ್ದಾನೆ. ಆದರೆ, ಪೋಷಕರನ್ನ ವಿಮ್ಸ್ ಆಡಳಿತ ಮಂಡಳಿ ಒಳಗಡೆ ಬಿಡದ ಸತಾಯಿಸಿದ್ದು, ನಿನ್ನೆ ರಾತ್ರಿ 10 ಗಂಟೆಗೆ ಮನೋಜ್ ಮೃತವಾಗಿರುವ ಬಗ್ಗೆ ಮಾಹಿತಿ ವಿಮ್ಸ್​ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.

RELATED ARTICLES

Related Articles

TRENDING ARTICLES