Monday, December 23, 2024

ಯುನಿವರ್ಸಿಟಿ ಮಾರಾಟಕ್ಕೆ ಕೈಹಾಕಿ ತಗ್ಲಾಕೊಂಡ ನಟಿ ಶ್ರೀಲಿಲಾ ತಾಯಿ.!

ಆನೇಕಲ್: ವಿಶ್ವ ವಿದ್ಯಾಲಯ ಮಾರಾಟ ಡೀಲ್​ಗೆ ಸ್ಯಾಂಡಲ್​ವುಡ್​ ಕನ್ನಡದ ಖ್ಯಾತ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಕೈಹಾಕಿದ ಹಿನ್ನಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಖ್ಯಾತ ರಾಜಕಾರಣಿಗೆ ಅಲೆಯನ್ಸ್ ವಿವಿ ಮಾರಿಸಲು ಸ್ವರ್ಣಲತಾ ಮುಂದಾಗಿದ್ದ ವೇಳೆ ಮಧುಕರ್ ಅಂಗೂರ್ ರಿಂದ ಯುನಿವರ್ಸಿಟಿ ಮಾರಾಟಕ್ಕೆ ಡೀಲ್ ಶ್ರೀಲಿಲಾ ಅವರ ತಾಯಿ ಕುದುರಿಸಿದ್ದರು. ಈ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿಯಾಗಿದ್ದಾರೆ.

ಆದ್ರೆ ಯೂನಿವರ್ಸಿಟಿಯಿಂದ ಈಗಾಗಲೇ ಹೊರಗೆ ಮಧುಕರ್ ಅಂಗೂರ್ ಬಿದ್ದಿದ್ದರು. ಆದ್ರೆ ಅಲೆಯನ್ಸ್ ಯುನಿವರ್ಸಿಟಿ ಮಾತ್ರ ಮಧುಕರ್ ಅಂಗೂರ್ ವಶದಲ್ಲಿ ಇರಲಿಲ್ಲ. ಕೆಲ ಗೂಂಡಾಗಳನ್ನ ಕರೆದಿಕೊಂಡು ವಿವಿ ಒಳಗೆ ನುಗ್ಗಿದ್ದ ಮಧುಕರ್ ಹಾಗೂ ಸ್ವರ್ಣಲತಾ, ಸೆ.10ರಂದು ಬೆಳಗ್ಗೆ 11 ಗಂಟೆಗೆ ಯುನಿವರ್ಸಿಟಿ ಅಡ್ಮಿನ್ ಬ್ಲಾಕ್ ಎಂಟ್ರಿಯಾಗಿ ಗಲಾಟೆ ನಡೆಸಿದ್ದಾರೆ. ಆಗ ಮಧುಕರ್ ಹಾಗೂ ಸ್ವರ್ಣಲತಾ ಗುಂಪುಕಟ್ಟಿಕೊಂಡು ಬಂದೂಕು ಹಿಡಿದುಕೊಂಡು ಎಂಟ್ರಿಕೊಟ್ಟಿದ್ದರು. ಯುನಿವರ್ಸಿಟಿ ಒಳಗೆ ಇದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಆರೋಪ ಹಿನ್ನಲೆಯಲ್ಲಿ ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮಧುಕರ್ನನ್ನ ಹೊರಹಾಕಲಾಗಿತ್ತು.

ಎಲ್ಲರ ಮೇಲೆ ಬಂದೂಕಿನಿಂದ ಶೂಟ್ ಮಾಡುವುದಾಗಿ ಹೆದರಿಸಿ ಪ್ರಕ್ಷ್ಯೂಬ್ಧ ವಾತವಾರಣ ನಿರ್ಮಾಣ ಮಾಡಿದ್ದರು. ಗುಂಪು ಕಟ್ಟಿಕೊಂಡು ಬಂದಿದ್ದ ಎಲ್ಲರ ಮೇಲೆ ಕ್ರಮಕ್ಕೆ ಯುನಿರ್ವಸಿಟಿ ರಿಜಿಸ್ಟ್ರಾರ್ ಡಾ ನಿವೇದಿತಾ ಮಿಶ್ರಾ ಅವರಿಂದ ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿತ್ತು ಈ ಹಿನ್ನೆಲೆಯಲ್ಲಿ ಎ1 ಆರೋಪಿ ಡಾ.ಮಧುಕರ್ ಅಂಗೂರ್ ಸೇರಿದಂತೆ ಗೂಂಡಾಗಿರಿ ಮಾಡಿದ ಕೆಲವರನ್ನೂ ಪೊಲೀಸ್​ರು ಬಂಧನ ಮಾಡಿದ್ದಾರೆ. ಆದ್ರೆ ಎ2 ಆಗಿರುವ ಶ್ರೀಲಿಲಾ ಅವರ ತಾಯಿ ಡಾ.ಸ್ವರ್ಣಲತಾ ಮಾತ್ರ ಪರಾರಿಯಾಗಿದ್ದು, ಸದ್ಯ ಆನೇಕಲ್ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಅಲೆಯನ್ಸ್‌ ವಿವಿ

ಅಯ್ಯಪ್ಪ ಎಂಟ್ರಿಯಾಗೋವರೆಗೂ ಅಲೆಯನ್‌ ವಿವಿ ಬನ್ನೇರುಘಟ್ಟ ರಸ್ತೆಯಲ್ಲಿ ಕೇವಲ ಕಾಲೇಜ್ ಆಗಿರುತ್ತೆ. ಕಾಲೇಜ್ ಆಗಿದ್ದನ್ನ ಖಾಸಗಿ ವಿವಿಯನ್ನಾಗಿ ಮಾಡಿದ್ದೇ ಅಯ್ಯಪ್ಪ ದೊರೆ ಮಾಸ್ಟರ್‌ ಮೈಂಡ್‌. ಅಯ್ಯಪ್ಪ ದೊರೆ ಆ ವೇಳೆಯಲ್ಲಿ ಸುಧೀರ್ ಅಂಗೂರ್ ಮಧುಕರ್‌ ಅಂಗೂರ್ ಇಬ್ಬರ ಬಳಿಯಲ್ಲಿ ಮಾತನಾಡಿ ಹಣ ಹೂಡಿಸುತ್ತಾರೆ. ಮಧುಕರ್ ಅಂಗೂರ್ ಅಮೆರಿಕದಲ್ಲಿದ್ರು. ಸುಧೀರ್ ಅಂಗೂರ್ ನೇತೃತ್ವದಲ್ಲಿ ಸುಮಾರು 60 ಎಕರೆ ಕೋಟಿ ಮೌಲ್ಯದ ಪ್ರಾಪರ್ಟಿಯನ್ನ ಖರೀದಿ ಮಾಡಲಾಗುತ್ತದೆ. ಅಂಗೂರ್ ಸಹೋದರರ ನೇತೃತ್ವದಲ್ಲಿ ಖಾಸಗಿ ವಿವಿ ಸ್ಥಾಪನೆಯಾಗುತ್ತದೆ. ನಂತ್ರ, ಸುಧೀರ್ ಅಂಗೂರ್ ಇದರ ಮ್ಯಾನೇಜ್‌ಮೆಂಟ್‌ ನೋಡಿಕೊಳ್ಳುತ್ತಿದ್ರು. ವ್ಯವಹಾರವನ್ನ ಅಯ್ಯಪ್ಪ ದೊರೆ ನೋಡ್ತಾ ಇರುತ್ತಾರೆ.

ಈ ಹಿಂದೆ ಅಲೆಯನ್ಸ್‌ ವಿವಿ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಅವರ ಹತ್ಯೆ ಮಾಡಲಾಗಿತ್ತು. ರಾತ್ರಿ ವೇಳೆ ವಾಯು ವಿಹಾರ ಮಾಡುತ್ತಿದ್ದಾಗ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

RELATED ARTICLES

Related Articles

TRENDING ARTICLES