Monday, December 23, 2024

ಕ್ಯೂಟ್ ನಟಿ ಶ್ರೀಲೀಲಾ ತಾಯಿ ಗನ್ ಹಿಡಿದು ಘರ್ಜಿಸಿದ್ಯಾಕೆ.?

ಬೆಂಗಳೂರು: ಭರಾಟೆ ಬೆಡಗಿ ಶ್ರೀಲೀಲಾ ಹೆಸ್ರು ಕೇಳ್ತಿದ್ದ ಹಾಗೆ ಪಡ್ಡೆ ಹೈಕಳ ಕಿವಿ ನೆಟ್ಟಗಾಗುತ್ತದೆ. ತಮ್ಮ ಮೋಹಕ ಸೌಂದರ್ಯದಿಂದಲೇ ಕನ್ನಡ, ತೆಲುಗು ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ. ಇದೀಗ ನಟಿ ಶ್ರೀಲೀಲಾ ಫ್ಯಾಮಿಲಿ ಕಿರಿಕ್​​​ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ. ಗುಂಡಾಗಿರಿ ಆರೋಪದಲ್ಲಿ ಶ್ರೀಲೀಲಾ ತಾಯಿಯ ಮೇಲೆ ಎಫ್​ಐಆರ್​ ದಾಖಲಾಗಿದೆ.

ನೂರಾರು ಕೋಟಿ ಡೀಲ್​ ಮಾಡಲು ಹೋದ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ, ಪೊಲೀಸ್​ ಪ್ರಕರಣದಲ್ಲಿ ಸಿಲುಕಿದ್ದಾರೆ. ಉನ್ನತ ಸ್ಥಾನದಲ್ಲಿರುವ ಖ್ಯಾತ ಗೈನಕಾಲಜಿಸ್ಟ್​ ಸ್ವರ್ಣಲತಾ ಮೇಲೆ ಗುಂಡಾಗಿರಿ ಆರೋಪ ಕೇಳಿ ಬಂದಿದೆ. ಗುಂಪು ಕಟ್ಟಿಕೊಂಡು, ಬಂದೂಕು ಹಿಡಿದು ಅಲಯನ್ಸ್​ ವಿವಿಗೆ ನುಗ್ಗಿ ಗಲಾಟೆ ಮಾಡಿರುವ ಆರೋಪ ಕೇಳಿಬಂದಿದ್ದು ಎಫ್ಐಆರ್​ ಕೂಡ ದಾಖಲಾಗಿದೆ.

ಆನೇಕಲ್​ನ ಅಲಯನ್ಸ್​ ವಿವಿಯನ್ನು ಖ್ಯಾತ ರಾಜಕಾರಣಿಗೆ ಮಾರಾಟ ಮಾಡಲು ಸ್ವರ್ಣಲತಾ ಡೀಲ್​ ಕುದುರಿಸಿದ್ದಾರೆ. ಮಧುಕರ್​ ಅಂಗೋರ್​​​ನಿಂದ ರಾಜಕಾರಣಿಗೆ ಮಾರಾಟ ಮಾಡಲು ಯತ್ನಿಸಿದ್ದ ಸ್ವರ್ಣಲತಾ, ಗೂಂಡಾ ಗುಂಪು ಕಟ್ಟಿಕೊಂಡು ವಿವಿಗೆ ನುಗ್ಗಿ ಬಂದೂಕು ಹಿಡಿದು ಎದರಿಸಿದ್ದಾರೆ ಎನ್ನಲಾಗ್ತಿದೆ. ಆದ್ರೆ, ವಿವಿಯ ಆಸ್ತಿ ಅಂಗೋರ್​ ವಶದಲ್ಲಿಲ್ಲ ಎನ್ನಲಾಗ್ತಿದೆ. ಇದೀಗ ಸ್ವರ್ಣಲತಾ ಮೇಲೆ ಎಫ್​​ಐಆರ್​ ದಾಖಲಾಗಿದ್ದು ಆರೋಪಿ ನಂಬರ್​​ 02 ಆಗಿದ್ದಾರೆ. ಅಂಗೂರ್​​ ಈಗಾಗಲೇ ಪೊಲೀಸರ ವಶದಲ್ಲಿದ್ದಾನೆ.

ಕೈಗೆ ಸಿಗದೆ ಸ್ವರ್ಣಲತಾ ಎಸ್ಕೇಪ್​.. ಪೊಲೀಸ್​ ಹುಡುಕಾಟ

ಅಮ್ಮನ ಕಿರಿಕ್​​​​ನಿಂದ ನಟಿ ಶ್ರೀಲೀಲಾ ಸಿನಿಜರ್ನಿಗೆ ಕಪ್ಪುಚುಕ್ಕೆ

ನೂರಾರು ಕೋಟಿ ಡೀಲ್​ ಮಾಡಲು ಹೋಗಿದ್ದ ಸ್ವರ್ಣಲತಾ ವಿರುದ್ದ ಆರೋಪ ಕೇಳಿ ಬರ್ತಿದ್ದಂತೆ ಎಸ್ಕೇಪ್​ ಆಗಿದ್ದಾರೆ. ಸೆ.10 ರಂದು ಮುಂಜಾನೆ 11 ಗಂಟೆಗೆ ಅಡ್ಮಿನ್​ ಬ್ಲಾಕ್​ಗೆ ನುಗ್ಗಿ ಬೇಕಾಬಿಟ್ಟಿ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಸಭ್ಯವಾಗಿ ಗುಂಡಾವರ್ತನೆ ತೋರಿದ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ವಿವಿಯ ರಿಜಿಸ್ಟ್ರಾರ್​ ಡಾ.ನಿವೇದಿತಾ ಮಿಶ್ರಾ ಆನೇಕಲ್​ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ.

ಇತ್ತ ಎಫ್ಐಆರ್​ ದಾಖಲಾಗ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿಯಾಗಿದ್ದಾರೆ. ಸದ್ಯ ಪೊಲೀಸರ ಹುಡುಕಾಟ ನಡಿತಿದ್ದು, ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಮಧುಕರ್​ ಅಂಗೂರ್​​ ಸೇರಿ ಕೆಲವರನ್ನೂ ಬಂಧಿಸಲಾಗಿದ್ದು ಕೆಲವರ ಹುಡುಕಾಟ ನಡೀತಿದೆ.

ಇತ್ತ ಗೊಂಡಾ ವರ್ತನೆಯ ಆರೋಪ ಕೇಳಿ ಬರ್ತಿದ್ದಂತೆ ನಟಿ ಶ್ರೀಲೀಲಾ ಇಸನಿ ಕರಿಯರ್​​ಗೆ ಕಪ್ಪು ಚುಕ್ಕೆ ಬಿದ್ದಿದೆ. ಮಾದ್ಯಮಗಳಿಗೆ ಉತ್ತರಿಸಲು ಶ್ರೀಲೀಲಾಗೆ ಬಾಯಿಯೇ ಇಲ್ಲದಂತಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಫ್ಯಾಮಿಲಿಯಿಂದ ಈ ರೀತಿ ನಡವಳಿಕೆಯ ಆರೋಪ ಕೇಳಿ ಬಂದಿರೋದ್ರಿಂದ ಸಿನಿಕರಿಯರ್​​ಗೆ ಹಿನ್ನೆಡೆಯಾಗೋ ಸಂಭವವಿದೆ ಎನ್ನಲಾಗ್ತಿದೆ. ನೇ ಆದ್ರೂ ಈ ಆರೋಪದ ಅಸಲಿಯತ್ತು ಏನು ಅನ್ನೋದಕ್ಕೆ ಸ್ವರ್ಣಲತಾ ಉತ್ತರ ಕೊಡಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES