Thursday, December 19, 2024

ಶೋಕಸಾಗರದಲ್ಲಿ ನಟ ಪ್ರಭಾಸ್.‌. ಸಲಾರ್ ಮತ್ತೆ ಪೋಸ್ಟ್​​​​​​​ಪೋನ್

ಬೆಂಗಳೂರು: ಸಿನಿಮಾಂತ್ರಿಕ ಪ್ರಶಾಂತ್​ ನೀಲ್​ ಅವ್ರ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ಸಲಾರ್​ ಮತ್ತೆ ಪೋಸ್ಟ್​ಪೋನ್​ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಪ್ರಭಾಸ್​ ಶೋಕಸಾಗರದಲ್ಲಿ ಮುಳುಗಿದ್ದಾರೆ. ಡಾರ್ಲಿಂಗ್​​​​ ಪ್ರಭಾಸ್​ ಮನೆಯಲ್ಲಿ ಸೂತಕದ ವಾತವರಣ ಮನೆ ಮಾಡಿದೆ. ಪ್ರಾನಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಜೀವ ಕಳೆದುಕೊಂಡಿರುವ ಪ್ರಭಾಸ್​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಟಾಲಿವುಡ್​ ಸೂಪರ್ ಸ್ಟಾರ್​​ ಪ್ರಭಾಸ್​​ ಸಿನಿಮಾಗಳಿಗೆ ಎಲ್ಲಿಲ್ಲದ ಬೇಡಿಕೆ. ಸದ್ಯ ಬಿಗ್​ ಬ್ರೇಕ್​​ ಸಿನಿಮಾಗಳಿಗೆ ಕಾಯ್ತಿದ್ದ ಪ್ರಭಾಸ್​​ ಸಲಾರ್​​, ಅದಿಪುರುಷ್​​ ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ರು. ಬಾಕ್ಸ್​ ಅಫೀಸ್​ ಕೆಲೆಕ್ಷನ್​ನಲ್ಲಿ ಸೋತ್ರೂ ನಿರ್ಮಾಪಕರ ಪಾಲಿನ ಚಿನ್ನದ ಖಜಾನೆ ಪ್ರಭಾಸ್​. ಜಿಂಕೆ ವೇಗದಲ್ಲಿ ಸಾಗ್ತಿದ್ದ ಪ್ರಭಾಸ್​ ಚಿತ್ರಗಳ ಶೂಟಿಂಗ್​​ಗೆ ಮತ್ತೆ ಬ್ರೇಕ್​ ಬಿದ್ದಿದೆ. ಡಾರ್ಲಿಂಗ್​ ಪ್ರಭಾಸ್​ ಮನೆಯಲ್ಲಿ ಸೂತಕದ ವಾತವರಣ ಮನೆ ಮಾಡಿದೆ.

ಕೆಲವು ದಿನಗಳ ಕಾಲ ಎಲ್ಲಾ ಸಿನಿಮಾಗಳಿಗೆ ಪ್ರಭಾಸ್​ ಫುಲ್​ ಸ್ಟಾಪ್​​ ಇಡ್ತಾ ಇರೋದಕ್ಕೂ ಬಲವಾದ ಕಾರಣವಿದೆ. ಪ್ರಭಾಸ್​​ ಜೀವಕಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾ ಇದ್ದ, ನೋವು ನಲಿವುಗಳಿಗೆ ಸಾಥ್​ ನೀಡ್ತಿದ್ದ ಪ್ರೀತಿಯ ದೊಡ್ಡಪ್ಪ ಕೃಷ್ಣಂ ರಾಜು ಇಹಲೋಕ ತ್ಯಜಿಸಿದ್ದಾರೆ. ಈ ವಿಷ್ಯ ತಿಳಿತಿದ್ದಂತೆ ಪ್ರಭಾಸ್​ ಕುಗ್ಗಿ ಹೋಗಿದ್ದಾರೆ. ಬಿಕ್ಕಿ ಬಿಕ್ಕಿ ಅತ್ತು ಸುಸ್ತಾಗಿದ್ದಾರೆ.  ಚಿತ್ರರಂಗದ ಸ್ನೇಹಿತರೆಲ್ಲಾ ಪ್ರಬಾಸ್​​​ರನ್ನ ಸಮಾಧಾನ ಮಾಡಿದ್ರು ಕಣ್ಣೀರಲ್ಲೇ ಪ್ರಭಾಸ್​ ಮುಳುಗಿ ಹೋಗಿದ್ದಾರೆ.

ಪ್ರಭಾಸ್​ ಜೀವನದ ಬೆಸ್ಟ್​ ಟೀಚರ್​ ಕೃಷ್ಣಂ ರಾಜು

ನೀಲ್​ಗೆ​ ಮತ್ತೆ ತಲೆ ನೋವಾದ ಸಲಾರ್​​ ಪ್ರಾಜೆಕ್ಟ್​​​​

ಕೃಷ್ಣಂ ರಾಜು ಪ್ರಭಾಸ್​ ಜೀವನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಪ್ರತಿಯೊಂದು ಸೋಲು, ಗೆಲುವುಗಳಲ್ಲೂ ಮಾರ್ಗದರ್ಶಕರಾಗಿ ಜತೆಗಿದ್ದವರು. ಅಕ್ಷರಶಃ ಕುಗ್ಗಿ ಹೋಗಿರುವ ಪ್ರಭಾಸ್​​ ಎಲ್ಲಾ ಸಿನಿಮಾಗಳ ಶೂಟಿಂಗ್​ಗೂ ಸದ್ಯ ಬ್ರೇಕ್​ ನೀಡಿ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಅಲ್ಲು ಅರ್ಜುನ್​ ಕೂಡ ಕೃಷ್ಣಂ ರಾಜು ಸಾವಿನ ಸುದ್ದಿ ತಿಳಿತಿದ್ದಂತೆ ಓಡಿ ಬಂದು ಪ್ರಭಾಸ್​ ತಬ್ಬಿ ಸಾಂತ್ವಾನ ಹೇಳಿದ್ದರು. ಚಿತ್ರರಂಗದ ಎಲ್ಲಾ ಕಲಾವಿದ್ರು, ಗಣ್ಯರು ಈ ಸಾವಿಗೆ ಸಂತಾಪ ಸೂಚಿಸಿದ್ರು. ಪ್ರಭಾಸ್​ ಕೂಡ ತಮ್ಮ ಟ್ವಿಟರ್​ ಖಾತೆಯಲ್ಲಿ ಮಿಸ್​ ಯು ಎಂದು ಬರೆದುಕೊಂಡು ತಮ್ಮ ನೋವನ್ನು ಹೊರ ಹಾಕಿದರು.

ಅದೇನೆ ಇರಲಿ ಬಿಗ್​ ಬೆಜೆಟ್​ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಪ್ರಬಾಸ್​ಗೆ ಈ ಆಘಾತದಿಂದ ದೊಡ್ಡ ಪೆಟ್ಟು ಬಿದ್ದಿದೆ. ಇತ್ತ ನೀಲ್​ ಕೂಡ ಆದಷ್ಟು ಬೇಗ ಸಲಾರ್​ ಪ್ರಾಜೆಕ್ಟ್​​ ಮುಗಿಸಿ ಎನ್​ಟಿಆರ್​ ಚಿತ್ರಕ್ಕೆ ಕೈ ಹಾಕುವ ಆಲೋಚನೆಯಲ್ಲಿದ್ದಾರೆ. ಇದೀಗ ಅದೂ ಸ್ವಲ್ಪ ಹಿನ್ನಡೆಯಾಗುವ ಸಂಭವವಿದೆ.

ಕೆಜಿಎಫ್​​ 2 ಬ್ಲಾಕ್​​ ಬಸ್ಟರ್​ ಹಿಟ್​ ಆದ ಮೇಲೆ ನೀಲ್​ ಕ್ಯಾಪ್ಟನ್​ ಶಿಪ್​ ನಲ್ಲಿ ಮೂಡಿ ಬರ್ತಿರೋ ಸಿನಿಮಾ ಸಲಾರ್​. ಇಡೀ ವಿಶ್ವವೇ ಸಲಾರ್​ ಸಿನಿಮಾಗಾಗಿ ಕಾಯ್ತಿದೆ. ಡ್ಯೂಪ್​​ ವಿಚಾರವಾಗಿ ಪ್ರಭಾಸ್​ ಮೇಲೆ ಕೋಪಗೊಂಡಿದ್ದ ನೀಲ್​​ ಸಿನಿಮಾ ಮುಗಿಸುವ ತವಕದಲ್ಲಿದ್ದಾರೆ. ಇದೆಲ್ಲದ್ರ ನಡುವೆ ಮತ್ತೆ ಪ್ರಭಾಸ್​​ ಶೂಟಿಂಗ್​​ಗೆ ಗೈರಾಗಿರೋದು ನೀಲ್​ ಸಿನಿಮಾಗೆ ತೊಡಕಾಗಿದೆ. ಎನಿವೇ ಆದಷ್ಟು ಬೇಗ ಪ್ರಭಾಸ್​ ಕಂಬ್ಯಾಕ್​ ಆಗಲಿ ಎಂದು ಹಾರೈಸೋಣ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES