ಹಾಸನ: ಜಿಲ್ಲೆಯ ವಿಶ್ವವಿಖ್ಯಾತ ಹಳೇಬೀಡು ದೇವಾಲಯಕ್ಕೆ ಯುನೆಸ್ಕೋ ಟೀಂ ಇಂದು ಭೇಟಿ ನೀಡಿ ಶಿಲ್ಪಕಲೆಗಳ ಕೆತ್ತನೆಯ ಶೈಲಿ ಬಗ್ಗೆ ಮಾಹಿತಿ ಪಡೆದಿದೆ.
ಇಂದು ಮಲೇಷಿಯಾದಿಂದ ಯನೆಸ್ಕೋ ತಂಡ ಹಾಸನ ತಾಲೂಕಿನ ಹಳೇಬೀಡು ಹೊಯ್ಸಳೇಶ್ವರ ದೇವಾಲಯಕ್ಕೆ ಶಿಲ್ಪಕಲೆಗಳ ಕೆತ್ತನೆಯ ಶೈಲಿ ಬಗ್ಗೆ ಮಾಹಿತಿ ಪಡೆದಿದ್ದು, ಜತೆಗೆ ಕರ್ನಾಟಕ ಟೂರಿಸಂ ಟಾಸ್ಕ್ ಫೋರ್ಸ್ ಹೆಡ್ ಸುಧಾ ಮೂರ್ತಿ ಅವರು ಭೇಟಿಗೆ ಸಾಥ್ ನೀಡಿದ್ದಾರೆ.
ಇಡೀ ದಿನ ಹಳೇಬೀಡು ದೇವಾಲಯದ ವಾಸ್ತುಶಿಲ್ಪಿ ಹಾಗೂ ವಾತಾವರಣ, ಸುತ್ತಮುತ್ತಲ ವ್ಯವಸ್ಥೆ ಸೇರಿದಂತೆ ಎಲ್ಲದರ ಬಗ್ಗೆ ಈ ತಂಡ ಪರಿಶೀಲನೆ ನಡೆಸಲಿದೆ. ನಂತರ ಈ ಮಾಹಿತಿಯನ್ನ ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಸಂಬಂಧ ಈ ತಂಡ ವರದಿ ನೀಡಲಿದೆ.
ಈ ವೇಳೆ ಹಾಸನ ಡಿಸಿ ಎಮ್ ಎಸ್ ಅರ್ಚನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ನಾಳೆ ಐತಿಹಾಸಿಕ ಬೇಲೂರು ಚನ್ನಕೇಶವ ದೇವಾಲಯಕ್ಕೆ ಭೇಟಿ ಈ ತಂಡ ನೀಡಲಿದೆ.