Sunday, January 19, 2025

Breaking: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ರಾಬಿನ್ ಉತ್ತಪ್ಪ ಗುಡ್​ ಬೈ

ಬೆಂಗಳೂರು: ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್​, ಐಪಿಎಲ್​​ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಇಂದು ಕ್ರಿಕೆಟಿಗ ರಾಬಿನ್ ಉತ್ತಪ್ಪ ನಿವೃತ್ತಿ ಘೋಷಿಸಿದರು.

ಈ ಬಗ್ಗೆ ಟ್ವೀಟ್​ ಮಾಡಿ ರಾಬಿನ್​, ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಕ್ರಿಕೆಟ್​ನಲ್ಲಿ ಪ್ರತಿನಿಧಿಸಿರುವುದು ಅತ್ಯಂತ ದೊಡ್ಡ ಗೌರವ. 20 ವರ್ಷಗಳ ನನ್ನ ಸುದೀರ್ಘ ಕ್ರಿಕೆಟ್​ನ ಎಲ್ಲಾ ಮಾದರಿಗಳ ಪಂದ್ಯಕ್ಕೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಸಹಕಾರ ನೀಡಿದ ಎಲ್ಲ ಭಾರತೀಯ ಕ್ರಿಕೆಟಿಗರಿಗೆ ಹಾಗೂ ಅಭಿಮಾನಿಗಳು ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಅಲ್ಲದೇ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಅವರು ಇಲ್ಲಿಯವರೆಗೆ ಆಡಿದ ಎಲ್ಲಾ ಐಪಿಎಲ್ ತಂಡಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ವೇಳೆ ತಂಡದಲ್ಲಿ ರಾಬಿನ್​ ಗುರುತಿಸಿಕೊಂಡು ತಮ್ಮ ಬ್ಯಾಟಿಂಗ್ ಕೈಚಳಕ ತೋರಿಸಿದ್ದರು. ಅಲ್ಲದೇ, ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ರಾಬಿನ್ ಅವರು ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ.

ರಾಬಿನ್​ ಉತ್ತಪ್ಪ ಅವರು ಭಾರತದ ಪರ 46 ಏಕದಿನ ಪಂದ್ಯಗಳಲ್ಲಿ 934 ರನ್ ಗಳಿಸಿದ್ದಾರೆ. 13 ಟಿ-20 ಪಂದ್ಯಗಳಲ್ಲಿ 249 ರನ್ ಗಳಿಸಿದ್ದಾರೆ. ಅಲ್ಲದೇ, 2007 ರ T-20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರಾಬಿನ್​ 50 ರನ್‌ಗಳನ್ನು ಗಳಿಸಿ ಭಾರತ ತಂಡಕ್ಕೆ ಉತ್ತರ ರನ್​ ಕಲೆಹಾಕುವಲ್ಲಿ ಕೊಡುಗೆ ನೀಡಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ(IPL) ಇತಿಹಾಸದಲ್ಲಿ ಅಧಿಕ ರನ್​ ಗಳಿಸಿದವರಲ್ಲಿ ರಾಬಿನ್​ ಉತ್ತಪ್ಪ ಅವರು 9 ನೇ ಸ್ಥಾನದಲ್ಲಿದ್ದಾರೆ. 205 ಪಂದ್ಯಗಳಲ್ಲಿ 27 ಅರ್ಧಶತಕಗಳೊಂದಿಗೆ 4952 ರನ್ ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES