Friday, November 22, 2024

ಆನ್​ಲೈನ್​ ವಂಚನೆ; ಒಂದೇ ಗಂಟೆಯಲ್ಲಿ ಮರಳಿ ಬ್ಯಾಂಕ್ ಖಾತೆದಾರರಿಗೆ ಹಣ

ವಿಜಯಪುರ: ಹಲವು ದಿನಗಳಿಂದ ಜಿಲ್ಲೆಯಲ್ಲಿ ದೂರು ಕೇಳಿಬರುತ್ತಿದ್ದ ಆನ್​ಲೈನ್​ ಹಣ ವಂಚನೆ ಪ್ರಕರಣಗಳನ್ನ ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.

ಸೈಬರ್, ಆರ್ಥಿಕ ಮತ್ತು ಮಾದಕ ದ್ತವ್ಯಗಳ ಅಪರಾಧ ಪೊಲೀಸ್ ಠಾಣೆಯಲ್ಲಿ 2022 ನೇ ಸಾಲಿನಲ್ಲಿ ಒಟ್ಟು 31 ಆನ್​ಲೈನ್​ ವಂಚನೆ ಪ್ರಕರಣಗಳು ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಅಲರ್ಟ್​ ಆದ ಪೊಲೀಸರು ಕಾರ್ಯಚರಣೆ ನಡೆಸಿ ಒಂದು ತಾಸಿನಲ್ಲಿ ವಂಚನೆಗೊಳಗಾದವರ ಬ್ಯಾಂಕ್ ಖಾತೆಗೆ ಮರಳಿ ಹಣವನ್ನ ಜಮೆ ಮಾಡಿಸಿದ್ದಾರೆ.

ಒಟ್ಟು 31 ಪ್ರಕರಣದಲ್ಲಿ ಆನ್​ಲೈನ್​ಲ್ಲಿ 39 ಲಕ್ಷ ರೂ.ಗಳ ವಂಚನೆ ಮಾಡಿದ್ದರು. ಇದರಲ್ಲಿ ಒಟ್ಟು 24 ಲಕ್ಷ ರೂ ಮರಳಿ 31 ದೂರುದಾರರ ಖಾತೆಗಳಿಗೆ ಜಮಾವಣೆ ಮಾಡಲಾಗಿದೆ. ಇದ್ರಲ್ಲಿ ಸಿಈಎನ್ ವಿಜಯಪುರ ಪೊಲೀಸ್ ಠಾಣೆಯಲ್ಲಿ 11 ವಂಚನೆ ಪ್ರಕರಣಗಳು ದಾಖಲಾಗಿದ್ದವು, 11 ಪ್ರಕರಣಗಳಲ್ಲಿ 28 ಲಕ್ಷ ರೂ ಮೇಲೆ ವಂಚನೆ, ಇವುಗಳಲ್ಲಿ 15 ಲಕ್ಷ ರೂ ಮರಳಿ ನೊಂದವರ ಬ್ಯಾಂಕ್ ಖಾತೆಗಳಿಗೆ ಪೊಲೀಸರು ಜಮೆ ಮಾಡಿಸಿದ್ದಾರೆ.

ಆನ್​ಲೈನ್​ ಪ್ರಕರಣವನ್ನ ಯಶಸ್ವಿಯಾಗಿ ಭೇದಿಸಿದ ಸಿಈಎನ್ ಇನ್ಸ್ಪೆಕ್ಟರ್ ಪಿಎಸ್ ರಮೇಶ ಅವಜಿ ಅವರ ನೇತೃತ್ವದ ತಂಡದವನ್ನ ವಿಜಯಪುರ ಎಸ್ ಪಿ ಎಚ್.ಡಿ.ಆನಂದಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ವೇಳೆ ಪ್ರಕರಣ ಬೇಧಿಸಿದ ತಂಡಕ್ಕೆ ಪ್ರಶಂಸಾ ಪತ್ರ, ನಗದು ಬಹುಮಾನ ವಿತರಣೆ ಮಾಡಲಾಯಿತು.

RELATED ARTICLES

Related Articles

TRENDING ARTICLES