Monday, December 23, 2024

ಮಂಗಳೂರು ಜಿಲ್ಲಾಧಿಕಾರಿ ಮೊಬೈಲ್​ ನಂಬರ್​ ಹ್ಯಾಕ್​.!

ಮಂಗಳೂರು: ದಕ್ಷಿಣ ಕ‌ನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಮೊಬೈಲ್ ನಂಬರ್​ನ್ನ ಹ್ಯಾಕರ್ಸ್​ಗಳು​​ ಹ್ಯಾಕ್ ಮಾಡಿದ್ದಾರೆ.

ಡಿಸಿ ಡಾ. ರಾಜೇಂದ್ರ ಕೆ.ವಿ ಅವರ ಹೆಸರು, ಫೋಟೋ ಬಳಸಿ ಹಣ ವರ್ಗಾಯಿಸುವಂತೆ ಹಲವರಿಗೆ ಮೆಸೇಜ್ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಯಾರೂ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ಡಿಸಿ ಮೊಬೈಲ್ ನಂಬರಲ್ಲಿ ಹಣ ವರ್ಗಾಯಿಸುವಂತೆ ವಾಟ್ಸಪ್ ಮೆಸೇಜ್, 8590710748 ನಂಬರ್ ನಿಂದ ಡಿಸಿ ಸಂಪರ್ಕದಲ್ಲಿದ್ದ ಹಲವರಿಗೆ ಮೆಸೇಜ್ ಕಳಿಸಲಾಗಿದೆ, ಈ ಬಗ್ಗೆ ಯಾರೂ ಹಣ ವರ್ಗಾಯಿಸುವಂತೆ ಜನರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದು, ಈ ಬಗ್ಗೆ ಸೈಬರ್ ಪೊಲೀಸರಿಗೆ ಡಾ. ರಾಜೇಂದ್ರ ಕೆ.ವಿ ಅವರು ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES