Wednesday, January 22, 2025

ಅಪ್ಪು ಡಿವೋಷನ್.. ಎಲ್ಲೆಲ್ಲೂ ಲಕ್ಕಿಮ್ಯಾನ್ ಹೌಸ್​ಫುಲ್

ಲಕ್ಕಿಮ್ಯಾನ್ ಬರೀ ಸಿನಿಮಾ ಅಲ್ಲ, ಅಪ್ಪು ಅನ್ನೋ ಎಮೋಷನ್ ಅಂತ ಎಲ್ರೂ ಹೇಳ್ತಿದ್ರು. ಆದ್ರೀಗ ಎಮೋಷನ್​ನ ಮೀರಿ ಡಿವೋಷನ್ ಆಗಿ ಬದಲಾಗಿದೆ ಆ ಅಭಿಮಾನ. ಅಭಿಮಾನಿ ದೇವರುಗಳು ರಾಜರತ್ನ ಅಪ್ಪುರನ್ನ ಕಣ್ತುಂಬಿಕೊಳ್ಳೋಕೆ ಫ್ಯಾಮಿಲಿ ಸಮೇತ ಥಿಯೇಟರ್​ಗೆ ನುಗ್ಗುತ್ತಿದ್ದಾರೆ. ಅದ್ರ ಸ್ಪೆಷಲ್ ಕಹಾನಿ ನಿಮಗಾಗಿ.

  • ವಿಷ್ಣು ಅವತಾರ ಜೊತೆ ನಗುಮುಖ ಕಂಡು ಫ್ಯಾನ್ಸ್ ಪುನೀತ
  • ದೇವ್ರು ಸೆಕೆಂಡ್ ಚಾನ್ಸ್ ಕೊಟ್ರೆ ಅಪ್ಪುನ ವಾಪಸ್ ಕರೆಸುತ್ತೇವೆ
  • ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿನ ಅವಿಸ್ಮರಣೀಯ ಕ್ಷಣಗಳು

ಕಳೆದ ವಾರ ತೆರೆಕಂಡ ಲಕ್ಕಿಮ್ಯಾನ್​ಗೆ ಎಲ್ಲೆಡೆಯಿಂದ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಕಟ್ಟ ಕಡೆಯ ಕಮರ್ಷಿಯಲ್ ಎಂಟರ್​ಟೈನರ್ ಅನ್ನೋದು ಎಲ್ಲರನ್ನ ಕಾಡುತ್ತಿದೆ.

ವ್ಯಕ್ತಿ ಇಲ್ಲವಾದ ಮೇಲೆ ಅವ್ರ ವ್ಯಕ್ತಿತ್ವ ದೇವರ ರೂಪ ಪಡೆದುಕೊಂಡಿದೆ. ಕಾಕತಾಳೀಯ ಅಂದ್ರೆ ಸಿನಿಮಾದಲ್ಲೂ ಅಪ್ಪು ದೇವರಾಗಿಯೇ ಬೆಳ್ಳಿತೆರೆ ಬೆಳಗಿದ್ದಾರೆ. ಅವ್ರ ಮಾತು, ಹಾವ, ಭಾವ, ನಗು ಹೀಗೆ ಒಂದೊಂದು ಅಂಶ ಕೂಡ ಸಿನಿಮಾದ ಗಮ್ಮತ್ತು ಹೆಚ್ಚಿಸಿವೆ. ಅದ್ರಲ್ಲೂ ಇಂಟರ್​ವಲ್ ಬ್ಲಾಕ್​ಗೂ ಮುನ್ನ ಪುನೀತ್ ರಾಜ್​ಕುಮಾರ್ ವಿಷ್ಣುವಿನ ಬೇರೆ ಬೇರೆ ಅವತಾರದಲ್ಲಿ ಕಾಣಿಸಿಕೊಳ್ಳೋ ಸೀಕ್ವೆನ್ಸ್​​ ನೋಡುಗರನ್ನ ಭಾವಪರವಶಗೊಳಿಸಲಿದೆ.

ಬಾಲಿವುಡ್​ನ ಸೂಪರ್ ಸ್ಟಾರ್ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಚೊಚ್ಚಲ ಸಿನಿಮಾ ಲಕ್ಕಿಮ್ಯಾನ್. ಮೊದಲ ಚಿತ್ರದಲ್ಲೇ ಶಹಬ್ಬಾಸ್ ಅನಿಸಿಕೊಳ್ಳೋ ರೇಂಜ್​ಗೆ ಸಿನಿಮಾನ ಅಚ್ಚುಕಟ್ಟಾಗಿ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ ನಾಗೇಂದ್ರ ಪ್ರಸಾದ್. ಇನ್ನು ಯೂತ್ಸ್​ಗೆ ಕನೆಕ್ಟ್ ಆಗೋ ಅಂತಹ ಪಕ್ಕಾ ಯೂತ್​ಫುಲ್, ಫ್ಯಾಮಿಲಿ ಎಂಟರ್​ಟೈನರ್.

ಹದಿಹರೆಯದ ಮನಸುಗಳ ಮನಸ್ಥಿತಿ ಹಾಗೂ ಪರಿಸ್ಥಿತಿಗಳನ್ನ ಸೂಕ್ಷ್ಮವಾಗಿ ಹೇಳಲಾಗಿದ್ದು, ಡಾರ್ಲಿಂಗ್ ಕೃಷ್ಣ ಅವ್ರು, ಚಿತ್ರ ವೀಕ್ಷಿಸೋ ಅಷ್ಟೂ ಮಂದಿಗೆ ಮೆಸೇಜ್ ಕೊಡಲಿದ್ದಾರೆ. ಕೃಷ್ಣ ಜೊತೆ ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್ ಚಿತ್ರದ ಗ್ಲಾಮರ್ ಹಾಗೂ ಗ್ರಾಮರ್ ಹೆಚ್ಚಿಸಿದ್ದಾರೆ. ಸಾಧು ಕೋಕಿಲಾ ಹಾಸ್ಯ ನೋಡುಗರ ಮುಖದಲ್ಲಿ ಮಂದಹಾಸ ಮೂಡಿಸಲಿದೆ.

ಅಭಿಮಾನಿ ದೇವರುಗಳ ಜೊತೆ ಕರುನಾಡಿನ ಕಲಾಭಿಮಾನಿಗಳು ಪ್ರತಿದಿನ ರಿಲೀಸ್ ಆದ 150ಕ್ಕೂ ಅಧಿಕ ಸ್ಕ್ರೀನ್ಸ್​ನ ಹೌಸ್​​ಫುಲ್ ಮಾಡ್ತಿದ್ದಾರೆ. ಅಪ್ಪು ಅನ್ನೋ ಎಮೋಷನ್​ಗಿಂತ ಅವ್ರು ಡಿವೋಷನ್ ಆಗಿ ಬದಲಾಗಿರೋದು ಕಲೆಕ್ಷನ್ ರಿಪೋರ್ಟ್​ಗೂ ಪ್ಲಸ್ ಆಗಿದೆ. ಅದ್ರಲ್ಲೂ ನಗುಮುಖದ ರಾಜಕುಮಾರ ಅಪ್ಪುರನ್ನ ಕಂಡು ಭಾವುಕರಾಗ್ತಿದ್ದಾರೆ. ದೇವ್ರು ನಿಜವಾಗ್ಲೂ ಸೆಕೆಂಡ್ ಚಾನ್ಸ್ ಕೊಟ್ರೆ ಅಪ್ಪುರನ್ನ ವಾಪಸ್ ಕರೆಸಿಕೊಳ್ತೀವಿ ಅಂತಿದ್ದಾರೆ.

ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡ್ತಿರೋ ಲಕ್ಕಿಮ್ಯಾನ್, ಕೃಷ್ಣ ಸಿನಿ ಕರಿಯರ್​ನ ಮರೆಯಲಾಗದ ಸಿನಿಮಾ ಆಗಿ ರಾರಾಜಿಸ್ತಿದೆ. ಡಿಸ್ಟ್ರಿಬ್ಯೂಟರ್ ಜಾಕ್ ಮಂಜು ದಿಲ್​ಖುಷ್ ಆಗಿದ್ದು, ಒಳ್ಳೆಯ ಸಿನಿಮಾ ಆಗಿರೋದ್ರಿಂದ ಅಪ್ಪು ಡೈಹಾರ್ಡ್​ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES