ಬೆಂಗಳೂರು : ಒಂದು ಭಾಷೆಯನ್ನ ದ್ವೇಷ ಮಾಡೋದ್ರಿಂದ ಪ್ರಯೋಜನ ಇದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಪ್ರತಿಯೊಂದು ಭಾಷೆಗೆ ಪ್ರಾಮುಖ್ಯತೆ ಇದೆ. ಕನ್ನಡ ಭಾಷೆಗೆ ಅದಕ್ಕೆ ಅಂದಂತಹ ಗೌರವ ಇದೆ. ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಮೌಲ್ಯಗಳಿವೆ. ಎಲ್ಲ ಭಾಷೆಗಳಿಗೆ ನಾವು ಗೌರವ ಕೊಡಬೇಕು. ಕನ್ನಡ ಭಾಷೆಗೆ ಯಾವುದೇ ತೊಂದರೆ ಆಗಬಾರದು. ಇಂಗ್ಲಿಷ್ ಭಾಷೆ ಅಂತರಾಷ್ಟ್ರೀಯ ಭಾಷೆ. ಉತ್ತರ ರಾಜ್ಯಗಳಿಗೆ ಹೋದಾಗ ಹಿಂದಿ ಭಾಷೆ ಮಾತಾಡಬೇಕಾಗುತ್ತದೆ ಎಂದರು.
ಅದಲ್ಲದೇ, ಒಂದು ಭಾಷೆಯನ್ನ ದ್ವೇಷ ಮಾಡೋದ್ರಿಂದ ಪ್ರಯೋಜನ ಇದೆ. ಹಿಂದಿ,ಇಂಗ್ಲೀಷ್ ಭಾಷೆ ಕಲಿಯಬೇಕು. ಅವರ ಭಾಷೆ ನಾವು ಕಲಿಯಬೇಕು. ನಮ್ಮ ಭಾಷೆ ಅವರು ಕಲಿಯಬೇಕು. ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದರು.