ಬೆಂಗಳೂರು : ಜಯನಗರ ಪೊಲೀಸ್ರು ಕಳೆದ 20 ದಿನಗಳ ಹಿಂದೆ ಗಾಂಜಾ ಸೇವನೆ ಮಾಡಿದ್ದ ಆರೋಪಿ ನಯಾಜ್ ಪಾಷಾ ಎಂಬಾತನನ್ನು ಬಂಧಿಸಿ ಕರೆತಂದಿದ್ದರು. ಲಾಠಿ ರುಚಿ ತಾಳೋಕಾಗ್ದೇ ಆರೋಪಿ ನಯಾಜ್ ಪಾಷಾ ಆಂದ್ರಪ್ರದೇಶದ ವ್ಯಕ್ತಿಗಳಿಂದ ಗಾಂಜಾ ಖರೀದಿ ಮಾಡ್ದೇ ಅಂತ ಬಾಯ್ಬಿಟ್ಟಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಜಯನಗರ ಇನ್ಸ್ ಪೆಕ್ಟರ್ ಮಂಜುನಾಥ್ ಟೀಂ ಆಂಧ್ರದ ಶ್ರೀಕಾಕುಳಂ ಬಳಿ ಗಾಂಜಾ ಪೆಡ್ಲರ್‌ಗಳಾದ ಸಾಗರ್ ಸಾಹೋ ಹಾಗೂ ಶೇಷಗಿರಿಯನ್ನು ಬಂಧಿಸಿತ್ತು. ಬಂಧಿಸುವ ವೇಳೆ ಪೊಲೀಸರ ಮೇಲೆ ಕಲ್ಲಿನಿಂದ ದಾಳಿ ನಡೆಸಿತ್ತು ಪೆಡ್ಲಿಂಗ್ ಟೀಂ. ಇದೀಗ ಡ್ರಗ್ಸ್ ಪೆಡ್ಲರ್‌ಗಳಿಂದ ಮೂರು ಕೋಟಿ ರೂಪಾಯಿ ಮೌಲ್ಯದ ಆ್ಯಶಿಷ್ ಆಯಿಲ್ ಹಾಗೂ 20 ಲಕ್ಷ ಮೌಲ್ಯದ 50 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಕೆಂಪೇಗೌಡ ನಗರ ಪೊಲೀಸ್ರು ರೌಂಡ್ಸ್‌ನಲ್ಲಿದ್ದ ಟೈಮ್‌ನಲ್ಲಿ ಒಂದು ಗಾಂಜಾ ಟೀಂ ತಗಲಾ ಕ್ಕೊಂಡಿತ್ತು. ನವಾಜ್ ಪಾಷಾ, ನೂರ್ ಅಹಮ್ಮದ್, ಶ್ರೀಮತಿ ಮುಬಾರಕ್,ಇಮ್ರಾನ್ ಪಾಷಾ ಹಾಗೂ ಕಿರಣ್ ಎಂಬವವರನ್ನು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗಳಿಂದ 66 ಕೆಜಿಯಷ್ಟು ಗಾಂಜಾವನ್ನು ವಶಕ್ಕೆ ಪಡೆಯುವಂತಹ ಕೆಲಸವನ್ನು ಕೆ.ಜಿ.ನಗರ ಇನ್ಸ್‌ಪೆಕ್ಟರ್ ರಕ್ಷಿತ್ ಆ್ಯಂಡ್ ಟೀಂ ಮಾಡಿತ್ತು. ಆರೋಪಿಗಳಿಗೆ ರೈಟು ಲೆಫ್ಟು ತೆಗೆದುಕೊಳ್ತಿದ್ದಂತೆ ಕೆಂಗೇರಿ ಬಳಿಯ ಮನೆಯೊಂದರಲ್ಲಿ ಬರೋಬ್ಬರಿ 440 ಕೆಜಿಯಷ್ಟು ಗಾಂಜಾವನ್ನು ಅಡಗಿಸಿಟ್ಟಿರುವ ಬಗ್ಗೆ ಮಾಹಿತಿ ನೀಡ್ತಿದ್ದಂತೆ ಪೊಲೀಸ್ರು ಉಳಿದ ಗಾಂಜಾ ಮಾಲನ್ನುಕೂಡ ವಶಪಡಿಸಿಕೊಂಡಿದ್ದರು.
ಸದ್ಯ ಕೆಜಿ ನಗರ ಹಾಗೂ ಜಯನಗರ ಪೊಲೀಸ್ರು ಮಾದಕ ವಸ್ತುಗಳನ್ನ ಮಾರಾಟ ಮಾಡ್ತಿದ್ದ ಗ್ಯಾಂಗನ್ನು ಹಿಡಿದು ಸೈ ಎನಿಸಿಕೊಂಡಿದ್ದಾರೆ. ಇದೇ ರೀತಿ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿದ್ದೇ ಹೌದಾದ್ರೆ ಕೊಂಚ ಬೆಂಗಳೂರು ಸೇಫ್ ಸಿಟಿಯಾಗೇ ಉಳಿದುಕೊಳ್ಳುತ್ತೆ.
ಅಶ್ವಥ್ ಕ್ರೈಂ ಬ್ಯೂರೋ ಪವರ್ ಟಿವಿ