Monday, December 23, 2024

ಕಲ್ಯಾಣ ಕರ್ನಾಟಕಕ್ಕೆ 316 ಹೊಸ ಬಸ್ ಖರೀದಿಗೆ ಸಿಎಂ ಅನುಮತಿ

ಕಲಬುರಗಿ: ಸೆಪ್ಟೆಂಬರ್​ 17 ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಕಲಬುರಗಿ ಅಮೃತ ಮಹೋತ್ಸವ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ.

ಈ ಬಗ್ಗೆ ನಗರದಲ್ಲಿಂದು ಕೆಕೆಆರ್‌ಡಿಬಿ ಭವನದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸೆ.17 ರಂದು ಬೆಳಗ್ಗೆ 8.30 ಕ್ಕೆ ಸರ್ಧಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿಗೆ ಸಿಎಂರಿಂದ ಮಾಲರ್ಪಣೆ ಮಾಡಲಿದ್ದಾರೆ. ನಂತರ ನಂತರ ಎನ್‌.ವಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾದ್ದು, ವಿವಿಧ ಸರ್ಕಾರಿ ಕಾಮಗಾರಿಗೆ ಹಾಗೂ ಯೋಜನೆಗಳ ಉದ್ಘಾಟನೆಯನ್ನ ಸಿಎಂ ಮಾಡಲಿದ್ದಾರೆ ಎಂದು ತಿಳಿಸಿದರು.

ಇನ್ನು ಕೆಕೆಆರ್‌ಡಿಬಿ ಮಂಡಳಿಯಿಂದ 45 ಕೋಟಿ ರೂ ವೆಚ್ಚದಲ್ಲಿ 316 ಬಸ್ ಖರೀದಿಗೆ ಸಿಎಂ ಅನುಮೋದನೆ ನೀಡಿದ್ದಾರೆ. ಈಗಾಗಲೇ ಕೊಪ್ಪಳ, ಬಳ್ಳಾರಿ, ರಾಯಚೂರು ವಿಮಾನ ನಿಲ್ದಾಣ ಕಾರ್ಯಕ್ಕೆ ಸರ್ಕಾರ 50 ಕೋಟಿ ರೂ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅದ್ಧೂರಿ ಕಲ್ಯಾಣ ಕರ್ನಟಕ ಅಮೃತ ಮಹೋತ್ಸವ ಆಚರಣೆಗೆ ನಿರ್ಧಾರಿಸಲಾಗಿದೆ ಎಂದರು.

RELATED ARTICLES

Related Articles

TRENDING ARTICLES