Monday, December 23, 2024

ಮಮತಾ ಸರ್ಕಾರದ ಭ್ರಷ್ಟಾಚಾರ ವಿರುದ್ಧ BJP ಕಿಡಿ

ಪಶ್ಚಿಮ ಬಂಗಾಳ : ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿದೆ. ದೀದಿಗೆ ಬಿಸಿ ಮುಟ್ಟಿಸುವ ಸಲುವಾಗಿ ನಡೆದ ಪ್ರತಿಭಟನೆ ಅಲ್ಲೋಲ- ಅಲ್ಲೋಲ ಸೃಷ್ಠಿಸಿದೆ. ಭ್ರಷ್ಟಾಚಾರದ ಆರೋಪ ಮಾಡಿ ಬೃಹತ್ ಪ್ರತಿಭಟನೆಗಿಳಿದ ಕೇಸರಿ ಪಡೆ ಮತ್ತು ಪೊಲೀಸರ ಮಧ್ಯೆ ಬಿಗ್‌ ವಾರ್‌ ನಡೀತು.

ಪ್ರತಿಭಟನಾ ಮೆರವಣಿಗೆ ಮೂಲಕ ಕೊಲ್ಕತ್ತಾದ ರಾಜ್ಯ ಕಾರ್ಯಾಲಯ ‘ನಬನ್ನಾ’ಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ್ರು. ಸುವೇಂದು ಅಧಿಕಾರಿ, ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಮತ್ತು ರಾಹುಲ್ ಸಿನ್ಹಾ ಸೇರಿದಂತೆ ಪಕ್ಷದ ಇತರ ನಾಯಕರನ್ನು ಸೆಕ್ರೆಟರಿಯೇಟ್ ಬಳಿಯ ಎರಡನೇ ಹೂಗ್ಲಿ ಸೇತುವೆಯ ಬಳಿಗೆ ಬರುತ್ತಿದ್ದಂತೆ ಪೊಲೀಸರು ತಡೆದು ಜೈಲು ವ್ಯಾನ್ನಲ್ಲಿ ಕರೆದೊಯ್ದರು.

ಹೌರಾ ಸೇತುವೆ ಬಳಿ ಪ್ರತಿಭಟನಾಕಾರರು ಭದ್ರತಾ ಅಧಿಕಾರಿಗಳೊಂದಿಗೆ ವಾಗ್ದಾದಕ್ಕೆ ನಡೆಸುತ್ತಿದ್ದಂತೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ಚದುರಿಸಿದರು. ಮಹಿಳೆಯರು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ಉತ್ತರ ಕೊರಿಯಾವನ್ನಾಗಿ ಮಾಡಿದ್ದಾರೆ ಎಂದು ಸುವೇಂದು ಅಧಿಕಾರಿ ವಾಗ್ದಾಳಿ ನಡೆಸಿದ್ದರು.

ಬಿಜೆಪಿಯ ಬೃಹತ್ ಪ್ರತಿಭಟನೆಯನ್ನು ತಡೆಯಲು ಪೊಲೀಸರು ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ. ಟಿಎಂಸಿ ಸರ್ಕಾರವು ಸಾರ್ವಜನಿಕ ದಂಗೆಗೆ ಹೆದರುತ್ತಿದೆ. ಅದಕ್ಕಾಗಿಯೇ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸ್ತಿದ್ದಾರೆ. ಒಟ್ಟಿನಲ್ಲಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊತ್ತಿಸಿರುವ ಕಿಚ್ಚು ಮಮತಾ ದೀದಿಗೆ ಒಂದಿಷ್ಟು ಆತಂಕ ತಂದಿರೋದಂತೂ ಸುಳ್ಳಲ್ಲ.

RELATED ARTICLES

Related Articles

TRENDING ARTICLES