ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಹಾಗೂ ಶೆಟ್ರ ಗ್ಯಾಂಗ್ನ ಹೆವಿ ಟ್ಯಾಲೆಂಟ್ ರಿಷಬ್ ಶೆಟ್ಟಿ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಸದ್ಯ ಇವ್ರ ಗುರು ಶಿಷ್ಯರು- ಕಾಂತಾರ ಟ್ರೈಲರ್ಗಳು ಸಖತ್ ಪ್ರಾಮಿಸಿಂಗ್ ಆಗಿವೆ. ಆದ್ರೆ ಭಾಗ್ಯಲಕ್ಷ್ಮೀ ಬ್ಯಾಂಕ್ಗಾಗಿ ಇವರಿಬ್ರ ನಡುವೆ ಪೈಪೋಟಿ ನಡೆದು, ಕೊನೆಗೆ ಒಬ್ರ ಪಾಲಾಗಿದೆ ಆ ಬ್ಯಾಂಕ್. ಈ ಕುರಿತ ಪವರ್ಫುಲ್ ಎಕ್ಸ್ಕ್ಲೂಸಿವ್ ಖಬರ್ ಇಲ್ಲಿದೆ. ನೀವೇ ಓದಿ.
- ಗುರು ಶಿಷ್ಯರು & ಕಾಂತಾರ ಫಿಲಂಸ್ ಸಖತ್ ಪ್ರಾಮಿಸಿಂಗ್
- ರಂಗಿತರಂಗ ಹೆಚ್ಕೆ ಪ್ರಕಾಶ್ ನಿರ್ಮಾಣದಲ್ಲಿ ಭಾಗ್ಯಲಕ್ಷ್ಮೀ
- ಪಕ್ಕಾ ಹಳ್ಳಿ ಬ್ಯಾಕ್ಡ್ರಾಪ್ನಲ್ಲಿ ನಡೆಯೋ ದರೋಡೆ ಕಥೆ..!
ಶರಣ್ ಅಂದಾಕ್ಷಣ ನೆನಪಾಗೋದು ಕಾಮಿಡಿ. ಆದ್ರೆ ಆ ಹಾಸ್ಯ ಪ್ರಧಾನ ಸಿನಿಮಾಗಳ ಹಿಂದೆ ಅವ್ರ ಸಾಕಷ್ಟು ನೋವು, ಅವಮಾನ, ಅಪಮಾನಗಳು ಅಡಗಿರುತ್ತೆ. ಬರೋಬ್ಬರಿ 99 ಸಿನಿಮಾಗಳ ನಂತ್ರ ನಾಯಕನಟನಾದ ಶರಣ್, 100ನೇ ಸಿನಿಮಾದಲ್ಲೂ ವೀಕ್ಷಕರಿಗೆ ಮನರಂಜನೆಯ ರಸಪಾಕವನ್ನೇ ಉಣಬಡಿಸಿದ್ರು. ಹೀರೋ ಆಗಿ, ನಿರ್ಮಾಪಕರಾಗಿ, ಗಾಯಕರಾಗಿ ಬೇರೆ ಬೇರೆ ಆಯಾಮಗಳಲ್ಲಿ ಗುರ್ತಿಸಿಕೊಂಡ್ರು.
ಸದ್ಯ ಇವ್ರ ಗುರುಶಿಷ್ಯರು ಸಿನಿಮಾ ನಿರೀಕ್ಷೆ ಮೂಡಿಸಿದೆ. ಕಾರಣ ಚಿತ್ರದ ಕಂಟೆಂಟ್, ಪಾತ್ರಗಳು, ಮೇಕಿಂಗ್ ಹಾಗೂ ಅದ್ರ ಹಿಂದಿನ ಹಾರ್ಡ್ ವರ್ಕ್, ಎಫರ್ಟ್. ಹೌದು. ಜಡೇಶ್ ಕೆ ಹಂಪಿ ನಿರ್ದೇಶನದ, ಶರಣ್- ತರುಣ್ ನಿರ್ಮಾಣದ ಗುರುಶಿಷ್ಯರು ಬಾಲಿವುಡ್ನ ಲಗಾನ್ ಸಿನಿಮಾ ನೆನಪಿಸ್ತಿದೆ. ದೇಸಿ ಕ್ರೀಡೆ ಖೋ ಖೋನ ಪ್ರಧಾನವಾಗಿಟ್ಕೊಂಡು ಈ ಚಿತ್ರ ತಯಾರಾಗಿದ್ದು, ಶರಣ್ ಕರಿಯರ್ನ ಬೆಸ್ಟ್ ಸಿನಿಮಾ ಆಗಿ ಹೊರಹೊಮ್ಮಲಿದೆ.
ಇತ್ತ ರಿಷಬ್ ಶೆಟ್ಟಿ ಕೂಡ ಯಾವುದೇ ಗಾಡ್ಫಾದರ್, ಬ್ಯಾಗ್ರೌಂಡ್ ಇಲ್ಲದೆ ಸೀದಾ ಸಾದಾ ವ್ಯಕ್ತಿಯಾಗಿ ಇಂಡಸ್ಟ್ರಿಗೆ ಕಾಲಿಟ್ರು. ಸಣ್ಣಪುಟ್ಟ ಪಾತ್ರಗಳನ್ನು ಪೋಷಿಸುತ್ತಿದ್ದ ರಿಷಬ್, ಬರಹಗಾರನಾಗಿ, ನಿರ್ದೇಶಕ, ನಿರ್ಮಾಪಕ, ನಾಯಕನಟ ಹೀಗೆ ತನ್ನ ಟ್ಯಾಲೆಂಟ್ನ ಹಂತ ಹಂತವಾಗಿ ವಿಸ್ತರಿಸಿಕೊಂಡು ಬಂದ್ರು. ಸದ್ಯ ಅವ್ರ ಕಾಂತಾರ ಸಖತ್ ಪ್ರಾಮಿಸಿಂಗ್ ಆಗಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಿಷಬ್ಗೆ ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ನಿರ್ಮಾಪಕ ಹೆಚ್.ಕೆ ಪ್ರಕಾಶ್ ಸಿನಿಮಾ ಮಾಡಲು ಮುಂದಾದ್ರು. ಆದ್ರೆ ಅದು ಕಥಾಸಂಗಮಕ್ಕಷ್ಟೇ ಸೀಮಿತವಾಯ್ತು. ನಂತರ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಅನ್ನೋ ಚಿತ್ರವನ್ನು ರಿಷಬ್ಗೇ ಮಾಡ್ಬೇಕು ಅಂತ ಪ್ರೊಡ್ಯೂಸರ್ ಕಥೆಯನ್ನ ಸಿದ್ಧಗೊಳಿಸಿದ್ರು. ರಿಷಬ್ ಡೇಟ್ಸ್ ಕ್ಲ್ಯಾಶ್ನಿಂದ ಅದೀಗ ಶರಣ್ ಪಾಲಾಗಿದೆ.
ಹೌದು.. ಇವ್ರು ಹೇಳಿದಂತೆ ಶರಣ್ ಕೂಡ ಪ್ರತಿಭಾವಂತ ಕಲಾವಿದ. ಯಾವುದೇ ಪಾತ್ರ ಕೊಟ್ರೂ ಲೀಲಾಜಾಲವಾಗಿ ಅಭಿನಯಿಸೋ ಚತುರ. ಹಾಗಾಗಿಯೇ ಹಳ್ಳಿ ಬ್ಯಾಕ್ಡ್ರಾಪ್ನಲ್ಲಿ ನಡೆಯೋ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರಕ್ಕೆ ಶರಣ್ ನಾಯಕನಟನಾಗ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದ್ದು, ಒಂದೊಳ್ಳೆ ಸಿನಿಮಾ ಆಗಿ ಮೂಡಿಬರಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ