Monday, January 13, 2025

ಸಿಲಿಕಾನ್​ ಸಿಟಿಯಲ್ಲಿ ಮೂವರು ಶಾಲಾ ಬಾಲಕಿಯರು ನಾಪತ್ತೆ

ಬೆಂಗಳೂರು : ಓದಲು ಇಷ್ಟವಿಲ್ಲ ಹಾಗಾಗಿ ಮನೆ ಬಿಟ್ಟು ಹೋಗ್ತಿದ್ದೀವಿ ಎಂದು ಪತ್ರ ಬರೆದು ಬಾಲಕಿಯರು ನಾಪತ್ತೆಯಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ನಗರದಲ್ಲಿ, ಮೂವರು ಶಾಲಾ ಬಾಲಕಿಯರು ನಾಪತ್ತೆಯಾಗಿದ್ದಾರೆ. ಸೆಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು, ಸೆಪ್ಟಂಬರ್ 6 ರಂದು ಶಕ್ತೀಶ್ವರಿ (15),ವರುಣಿಕ (16),ನಂದಿನಿ (15) ಕಾಣೆಯಾಗಿರೊ ಬಾಲಕಿಯರು ಕಾಣೆಯಾಗಿ 9 ದಿನವಾದರೂ ಇನ್ನೂ ಪತ್ತೆಯಾಗಲಿಲ್ಲ.

ಇನ್ನು, ಪೋಷಕರು ಎಷ್ಟೇ ಹುಡುಕಿದರೂ ಪತ್ತೆಯಾಗದ ಬಾಲಕಿಯರು, ಶಾಲೆಯಲ್ಲಿ ಕೇಳದರು ಸರಿಯಾಗಿ ಉತ್ತರ ನೀಡ್ತಿಲ್ಲವಂತೆ, ಮನೆಯಲ್ಲಿ ಸಮಸ್ಯೆ ಹಾಗಾಗಿ ಮನೆ ಬಿಟ್ಟು ಹೋಗ್ತಿದ್ದೀವಿ, ಓದಲು ಇಷ್ಟವಿಲ್ಲ ಹಾಗಾಗಿ ಮನೆ ಬಿಟ್ಟು ಹೋಗ್ತಿದ್ದೀವಿ ಎಂದು ಪತ್ರ ಬರೆದಿದ್ದಾರೆ.

RELATED ARTICLES

Related Articles

TRENDING ARTICLES