ಬೆಂಗಳೂರು : 545 ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಆಳ-ಅಗಲ ಬಗೆದಷ್ಟು ಜಾಸ್ತಿಯಾಗ್ತಿದೆ. ಕಾಂಗ್ರೆಸ್ ನಾಯಕರ ಹೆಸರು ಮಾತ್ರವಲ್ಲ, ಬಿಜೆಪಿ ನಾಯಕರ ಹೆಸರುಗಳೂ ತಳುಕು ಹಾಕಿಕೊಳ್ತಿದೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಿವರಾಜ್ ತಂಗಡಗಿ ಹಾಕಿದ್ದ ಆಡಿಯೋ, ವೀಡಿಯೋ ಬಾಂಬ್, ಬಿಜೆಪಿ ಶಾಸಕ ಬಸವರಾಜ ದಡೇಸಗೂರು ಬುಡವನ್ನ ಅಲ್ಲಾಡಿಸ್ತಿದೆ. ಮಧ್ಯದಲ್ಲಿ ಏನ್ ಮಾತುಕತೆ ಆಯ್ತೋ ಏನೋ, ಹಣ ನೀಡಿದ್ದಾರೆನ್ನಲಾದ ಪರಸಪ್ಪ ದಡೇಸಗೂರು ಪರವಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬೆಂಗಳೂರು ಪ್ರೆಸ್‌ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪರಸಪ್ಪ, ಪಿಎಸ್‌ಐ ಸ್ಕ್ಯಾಮ್‌ಗೂ ನಮಗೂ ಸಂಬಂಧ ಇಲ್ಲ. 10-12 ಲಕ್ಷ ಮೌಲ್ಯದ ಜಮೀನು ವಿಚಾರಕ್ಕೆ ನಮ್ಮ ಸಂಬಂಧಿಕರೊಂದಿಗೆ ಗಲಾಟೆ ಆಗಿತ್ತು.. ಅದನ್ನ ಶಾಸಕರ ಬಳಿ ಮಾತಾಡಿದ್ವಿ, ಆ ಆಡಿಯೋ, ವೀಡಿಯೋಗಳನ್ನ ತಿರುಚಿ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ ಅಂತ ಪರಸಪ್ಪ ಹೇಳಿದ್ರು.
ಇನ್ನು ಪಿಎಸ್‌ಐ ಸ್ಕ್ಯಾಮ್‌ನಲ್ಲಿ ನಮ್ಮ ಹೆಸರು ತಂದು, ತೇಜೋವಧೆ ಮಾಡಿದ್ದಾರೆ. ಪೊಲೀಸ್ ಆಯುಕ್ತರಿಗೆ ದೂರು ಕೊಡ್ತೀನಿ ಅಂತ ಪರಸಪ್ಪ ಹೇಳಿದ್ರು. ಮಂಪರು ಪರೀಕ್ಷೆಗೆ ಒಳಗಾಗ್ತೀರಾ ಎಂದು ಕೇಳಿದ ಪ್ರಶ್ನೆಗೆ ತಡಬಡಾಯಿಸಿ ಸುದ್ದಿಗೋಷ್ಠಿಯಿಂದಲೇ ಪರಾರಿಯಾದ್ರು. ಪ್ರೆಸ್‌ಮೀಟ್‌ಗೆ ಬಸವರಾಜ ದಡೇಸಗೂರು ಆಪ್ತ ಕೂಡ ಆಗಮಿಸಿದ್ದ. ಅವ್ರ ಕಾರಿನಲ್ಲೇ ಪರಸಪ್ಪ ಕಾಲ್ಕಿತ್ತಿದ್ದನ್ನು ನೋಡಿದ್ರೆ, ಶಾಸಕರ ಒತ್ತಡಕ್ಕೆ ಮಣಿದಿದ್ದಾರೇನೋ ಅನ್ನೋ ಅನುಮಾನ ಕಾಡ್ತಿದೆ.
ಇನ್ನು ವಿಧಾನಸಭೆಯಲ್ಲಿ ಬಿಜೆಪಿ ಶಾಸಕನ ಕೈವಾಡದ ಬಗ್ಗೆ ದಾಖಲೆ ಬಿಡುಗಡೆ ಮಾಡಿ, ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಈ ಮಧ್ಯೆ ಮತ್ತೊಂದು ಬಾಂಬ್ ಹಾಕೋದಾಗಿ ಶಿವರಾಜ ತಂಗಡಗಿ ವಿಧಾನಸೌಧದಲ್ಲಿ ಹೇಳಿದ್ರು. ಆಡಿಯೋ ನಂದೇ ಅಂತಾ ಅವ್ರು ಒಪ್ಪಿಕೊಂಡಿದ್ದಾರೆ. ಅಷ್ಟೊಂದು ಪ್ರಾಮಾಣಿಕರಾಗಿದ್ರೆ ಇಂಜಂಕ್ಷನ್ ಆರ್ಡರ್ ಯಾಕೆ ತಂದ್ರು ಅಂತ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ರು..
ಇನ್ನು ತಮ್ಮ ವಿರುದ್ದ ಬಹಳಷ್ಟು ವಿಡಿಯೋ ಇದ್ದಾವೆ ಎಂದು ಮಾಜಿ ಸಚಿವರು ಹೇಳಿದ್ದಾರೆ. ಮೊದಲು ಆ ವಿಡಿಯೋಗಳನ್ನು ಬಿಡುಗಡೆ ಮಾಡಲಿ ಅಂತ ಬಸವರಾಜ ದಡೇಸಗೂರು ಸವಾಲ್ ಹಾಕಿದ್ದಾರೆ.
ಒಟ್ನಲ್ಲಿ ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರ ಸದನದಲ್ಲೂ ಕೋಲಾಹಲ ಎಬ್ಬಿಸೋ ಸಾಧ್ಯತೆ ಇದೆ. ಬಸವರಾಜ್ ದಡೇಸಗೂರು ವಿರುದ್ಧ ಇನ್ನಷ್ಟು ದಾಖಲೆಗಳು ಬಿಡುಗಡೆ ಆದ್ರೆ ಅವ್ರ ವಿಕೆಟ್ ಪತನ ಆಗೋ ಸಾಧ್ಯತೆ ಇದೆ.