Monday, December 23, 2024

T-20 ವಿಶ್ವಕಪ್​ಗೆ ಬಾಂಗ್ಲಾ ತಂಡ ಪ್ರಕಟ: ಮಾಜಿ ನಾಯಕನಿಗೆ ಕೋಕ್​

ನವದೆಹಲಿ: ಅಕ್ಟೋಬರ್​​ 16 ರಿಂದ ನವೆಂಬರ್​ 13 ರವರೆಗೂ ನಡೆಯುವ ಟಿ-20 ವಿಶ್ವಕಪ್​ಗೆ ಬಾಂಗ್ಲಾದೇಶ ಕ್ರಿಕೇಟ್ ಸಂಸ್ಥೆಯು ತನ್ನ ತಂಡವನ್ನ ಪ್ರಕಟ ಮಾಡಿದೆ.

ಮುಂಬರುವ ಅಕ್ಟೋಬರ್​​ 16 ರಿಂದ ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ​ ಪಂದ್ಯಗಳು ಆರಂಭವಾಗುತ್ತಿದ್ದು, 15 ಸದಸ್ಯರ  ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್​ ಸಂಸ್ಥೆ ಆಯ್ಕೆ ಮಾಡಿದೆ. ಈ ಕಪ್​ನಲ್ಲಿ ಒಟ್ಟು 12 ತಂಡಗಳು ಕಾದಾಟ ನಡೆಸಲಿವೆ.

ಇನ್ನು ಗಮನಾರ್ಹ ಸಂಗತಿ ಎಂದು ಬಾಂಗ್ಲಾದೇಶ ತಂಡದ ಮಾಜಿ ನಾಯಕ ಮಹಮ್ಮದುಲ್ಲಾ ಆಯ್ಕೆಯಾಗದಿರುವ ಬಾಂಗ್ಲಾ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ. ಕಳೆದ ಕೆಲವು ಟಿ-20 ಪಂದ್ಯಗಳಲ್ಲಿ ಉತ್ತವ ಸ್ಟೈಕ್​ ರೇಟ್​ ಹೊಂದಿರದ ಕಾರಣಕ್ಕೆ ಮಹಮ್ಮದುಲ್ಲಾ ಅವರನ್ನ ಬಾಂಗ್ಲಾ ಕೈಬಿಟ್ಟಿದೆ.

ವಿಶ್ವಕಪ್​ಗೆ ಬಾಂಗ್ಲಾ ತಂಡ 

ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತಸ್ಕಿನ್ ಅಹ್ಮದ್, ಯಾಸಿರ್ ಅಲಿ, ನೂರುಲ್ ಹಸನ್, ಎಬಾಡೋತ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್, ಹಸನ್ ಮಹ್ಮದ್, ಅಫೀಫ್ ಹೊಸೈನ್, ಮುಸ್ತಫಿಜುರ್ ರೆಹಮಾನ್, ನಸುಮ್ ಅಹ್ಮದ್, ಮೊಸದ್ದೆಕ್ ಹೊಸೈನ್, ಮೊಹಮ್ಮದ್ ಸೈಫುದ್ದೀನ್, ನಜ್ಮುಲ್ ಹೊಸೈನ್ ಶಾಂತೋ.

RELATED ARTICLES

Related Articles

TRENDING ARTICLES