Monday, December 23, 2024

30ನೇ ವಸಂತಕ್ಕೆ ಕಾಲಿಟ್ಟ ನಟಿ ಅಮೂಲ್ಯ

ಸ್ಯಾಂಡಲ್​​ವುಡ್ ನಟಿ ಅಮೂಲ್ಯ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ. ಕುಟುಂಬದವರು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದಲೂ ಶುಭಾಶಯಗಳು ಹರಿದುಬರುತ್ತಿವೆ.

ಜಗದೀಶ್​ ಜೊತೆ ಮದುವೆ ಆದ ಬಳಿಕ ಅಮೂಲ್ಯ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂಬುದು ಅಭಿಮಾನಿಗಳ ಬಯಕೆ. ಈ ವರ್ಷ ಜೂನ್​​ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ ಅವರು ಸದ್ಯಕ್ಕೆ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಪತಿ ಜಗದೀಶ್​ ವಿಶೇಷವಾಗಿ ವಿಶ್​ ಮಾಡಿಕೊಂಡಿದ್ದಾರೆ. ತಮ್ಮ ಪಾಲಿಗೆ ಈ ದಿನವೇ ‘ವ್ಯಾಲೆಂಟೈನ್​ ಡೇ’ ಎಂದು ಹೇಳಿದ್ದಾರೆ. ಅಮೂಲ್ಯ ಜತೆ ಕ್ಲಿಕ್ಕಿಸಿಕೊಂಡಿರುವ ಹತ್ತಾರು ಫೋಟೋಗಳನ್ನು ಜಗದೀಶ್​ ಅವರು ಹಂಚಿಕೊಂಡಿದ್ದಾರೆ.

ನನಗೆ ಸೆಪ್ಟೆಂಬರ್​ 14 ವ್ಯಾಲೆಂಟೈನ್​ ಡೇ. ಹುಟ್ಟುಹಬ್ಬದ ಶುಭಾಶಯಗಳು ಅಮೂಲ್ಯ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಇದು ನಾವು ಕಳೆದ ಪ್ರೀತಿಯ ಕ್ಷಣಗಳು’ ಎಂದು ಈ ಪೋಸ್ಟ್​ಗೆ ಅವರು ಕ್ಯಾಪ್ಷನ್​ ನೀಡಿದ್ದಾರೆ.

RELATED ARTICLES

Related Articles

TRENDING ARTICLES