Tuesday, December 24, 2024

ಮೀನುಗಾರಿಕಾ ಇಲಾಖೆಯಲ್ಲಿ ಭಾರೀ ಅವ್ಯವಹಾರ..?

ತುಮಕೂರು :  ಜಿಲ್ಲೆ ಕೊರಟಗೆರೆ ತಾಲೂಕಿನ ಐತಿಹಾಸಿಕ ಕ್ಷೇತ್ರ ಗೊರವನಹಳ್ಳಿಯ ತೀತಾ ಜಲಾಶಯದಿಂದಾಗಿ ಭೂಮಿ ಕಳೆದುಕೊಂಡವರು ಹಾಗೂ ತೀತಾ ಜಲಾಶಯದಲ್ಲಿ ಮೀನು ಕೃಷಿ ಮಾಡಿ ಜೀವನ ನಡೆಸುತ್ತಿದ್ದವರು ಅಕ್ಷರ ಶಹ ಬೀದಿಗೆ ಬಿದ್ದಿದ್ದಾರೆ.ಇದಕ್ಕೆಲ್ಲಾ ಕಾರಣ ಸರ್ಕಾರ ಮಾಡಿರುವ ಆ ಆದೇಶ. ಜಲಾಶಯದ ಮೀನುಗಳನ್ನು ಕೃಷಿಗಾಗಿ ಸ್ಥಳೀಯ ಮೀನುಗಾರಿಕಾ ಸಹಕಾರ ಸಂಘಕ್ಕೆ ನೀಡಿ ಎನ್ನುವುದೇ ಆ ಆದೇಶ. ಇದೇ ಆದೇಶವನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳು, ಸಂಘಗಳಿಗೆ ಕಡಿಮೆ ಬಿಡ್ ಹಣಕ್ಕೆ ಮೀನು ಕೃಷಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೌದು, ಇದಕ್ಕೆ ಪೂರಕ ಎಂಬಂತೆ ತೀತಾ ಪಕ್ಕದ ವೀರಾಪುರ ಕೆರೆ ಬರೋಬರೀ 1 ಲಕ್ಷದ 75 ಸಾವಿರಕ್ಕೆ ಹರಾಜಾಗಿದ್ರೆ, ವೀರಾಪುರ ಕೆರೆಗಿಂತ ಐದು ಪಟ್ಟು ದೊಡ್ಡದಾಗಿರುವ ತೀತಾ ಜಲಾಶಯದಲ್ಲಿ ಹರಾಜಾಗಿರೋದು ಮಾತ್ರ ಕೇವಲ 23 ಸಾವಿರದ 788 ರೂಪಾಯಿಗಳಿಗೆ ಮಾತ್ರ. ಇನ್ನೂ ಕೆರೆಗಳ ಹರಾಜು ಹಣಕ್ಕಿಂತ 5 ಪಟ್ಟು ಕಡಿಮೆ ಹಣಕ್ಕೆ ತೀತಾ ಜಲಾಶಯ ಹರಾಜಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇನ್ನೂ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಬರೋಬ್ಬರಿ 5 ವರ್ಷಗಳ ಅವಧಿಗೆ ತೀತಾ ಜಲಾಶಯವನ್ನು 4% ಹಣ ಹೆಚ್ಚಳಕ್ಕೆ ಗುತ್ತಿಗೆ ನೀಡಿದ್ದು, ಇದರಿಂದಾಗಿ ಸ್ಥಳೀಯ ಮೀನುಗಾರರಿಗೆ ಅನ್ಯಾಯವಾಗಿದೆ ಹಾಗೂ ಸ್ಥಳೀಯವಾಗಿ ಹರಾಜಿನಿಂದ ಸರ್ಕಾರಕ್ಕೂ ನಷ್ಟವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಅದೇನೇ ಇರಲಿ ಸರ್ಕಾರದ ಆದೇಶಗಳನ್ನೇ ದುರುಪಯೋಗ ಪಡಿಸಿಕೊಂಡು ಸ್ಥಳೀಯ ಮೀನುಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಹಾಗಾಗಿ ಈ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಓಪನ್ ಟೆಂಡರ್ ನಡೆಸುವ ಮೂಲಕ ಸ್ಥಳೀಯ ಮೀನುಗಾರರಿಗೆ ಮೋದಿ ಕನಸಿನ ಆತ್ಮನಿರ್ಭರ್‌ಗೆ ಅವಕಾಶ ಮಾಡಿಕೊಡಬೇಕೆಂಬುದು ಸ್ಥಳೀಯರ ಮನವಿಯಾಗಿದೆ.

ಹೇಮಂತ್ ಕುಮಾರ್. ಜೆ.ಎಸ್.ಪವರ್ ಟಿವಿ ತುಮಕೂರು

RELATED ARTICLES

Related Articles

TRENDING ARTICLES