Sunday, January 19, 2025

T-20 ವಿಶ್ವಕಪ್​; ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಭಾರತ.!

ನವದೆಹಲಿ: ಮುಂಬರುವ ಟಿ-20 ವಿಶ್ವಕಪ್​ ಗೆ ಭಾರತ ತಂಡದ ಆಟಗಾರರಿಗೆ ಹೊಸ ಜೆರ್ಸಿಯನ್ನ ಶೀಘ್ರದಲ್ಲಿಯೇ ಬಿಸಿಸಿಐ ಬಿಡುಗಡೆ ಮಾಡಲಿದೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ 16 ರಿಂದ ನಡೆಯಲಿರುವ T-20 ವಿಶ್ವಕಪ್ ಪಂದ್ಯವಳಿಗೆ ನಿನ್ನೆ ಅಷ್ಟೇ ಬಿಸಿಸಿಐ 15 ಸದಸ್ಯರನ್ನ ಒಳಗೊಂಡ ಭಾರತ ತಂಡದ ಆಟಗಾರರನ್ನ ಪ್ರಕಟಿಸಿತ್ತು. ಈಗ ಹೊಸ ಜೆರ್ಸಿ ಬಿಡುಗಡೆ ಮಾಡುವ ಸುಳಿವು ಬಿಸಿಸಿಐ ಬಿಚ್ಚಿಟ್ಟಿದೆ.

ಈ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟ್ವೀಟ್​ ಮಾದ್ದು, ಇದ್ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಜೊತೆಗೆ ಶ್ರೇಯಸ್ ಅಯ್ಯರ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಹೊಸ ಬಗ್ಗೆ ಜಾಕೇಟ್​ ಧರಿಸಿದ್ದಾರೆ. ಒಳಗಡೆಯ ಹೊಸ ಜೆರ್ಸಿ ಇರುವುದನ್ನ ಈ ವೀಡಿಯೊದಲ್ಲಿ ಕಾಣಬಹುದು. ಶೀಘ್ರದಲ್ಲೇ ಹೊಸ ಜೆರ್ಸಿಯನ್ನು ಅನಾವರಣ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಟೀಮ್ ಇಂಡಿಯಾ ಹೊಸ ಜರ್ಸಿ ಈ ರೀತಿ ಇರಲಿದೆ ಎಂದು ವರದಿ ಅಂದಾಜಿಸಲಾಗಿದೆ. 

RELATED ARTICLES

Related Articles

TRENDING ARTICLES