Wednesday, January 22, 2025

ಕಂಡ ಕನಸು ನನಸು ಮಾಡಿದ ರಾಕಿಭಾಯ್​ ಹೇಳಿದ್ದೇನು..?

ಸಿನಿಕಾನ್​ ಸಿಟಿಯಲ್ಲಿ ಈ ಬಾರಿ ಅದ್ಧೂರಿ ಸೈಮಾ ಅವಾರ್ಡ್​​​ ಕಾರ್ಯಕ್ರಮ ನಡಿತಿದೆ. ಅಪ್ಪು ಸ್ಮರಣೆಯಲ್ಲಿ ಸೈಮಾ ಸಿನಿ ಹಬ್ಬಕ್ಕೆ ಗ್ರ್ಯಾಂಡ್​​ ವೆಲ್ಕಮ್​ ಸಿಕ್ಕಿದೆ. ಹತ್ತನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೆ ಸೌಥ್​ ಸ್ಟಾರ್​​​​ಗಳೆಲ್ಲಾ ರಂಗು ರಂಗಿನ ಬಟ್ಟೆ ತೊಟ್ಟು ಮಿಂಚ್ತಿದ್ದಾರೆ. ಮೊದಲ ಬಾರಿಗೆ ಕನ್ನಡದ ನೆಲದಲ್ಲಿ ಸೈಮಾ ಅವಾರ್ಡ್​​​​ ಫಂಕ್ಷನ್​​ ನಡಿತಿದೆ. ರಾಕಿಭಾಯ್​​​​ ಆಡಿರೋ ಮಾತುಗಳು ಕನ್ನಡದ ಗತ್ತು ತಾಕತ್ತನ್ನು ದುಪ್ಪಟ್ಟು ಮಾಡಿವೆ.

  • ಇಂಡಿಯನ್​ ಸಿನಿದುನಿಯಾಗೆ ಕರುನಾಡೇ ಹೆಡ್​ ಆಫೀಸ್​​​

ಕನ್ನಡ ಚಿತ್ರರಂಗ ಅಂದ್ರೆ ಮೂಗು ಮುರಿತಿದ್ದ ಸಿನಿಪ್ರಿಯರಿಗೆ ಸ್ಯಾಂಡಲ್​ವುಡ್​ ರಂಜಾನ್​ ಬಿರಿಯಾನಿ ಹಾಕಿಸಿದೆ. ಇಡೀ ಭಾರತವೇ ಬೆಚ್ಚಿ ಬೀಳುವ ಹಾಗೆ ತೊಡೆ ತಟ್ಟಿ ನಿಂತಿದೆ. ಎಲ್ಲರೂ ಮೂಖವಿಸ್ಮಿತರಾಗುವಂತ ಸಿನಿಮಾಗಳನ್ನು ನೀಡಿದೆ. ಯೆಸ್​​.. ಹತ್ತನೇ ಆವೃತ್ತಿಯ ಸೈಮಾ ಫಿಲ್ಮ್​ ಅವಾರ್ಡ್​​ ಕನ್ನಡದ ನೆಲದಲ್ಲಿ ನಡೀತಿದೆ. ಕನ್ನಡದ ಕಂಪಿನಲ್ಲಿ, ಕನ್ನಡದ ನೆಲದಲ್ಲಿ ಸೈಮಾ ಸಿನಿಮೋತ್ಸವ ಕಳೆಗಟ್ಟಿದೆ. ಇಂಡಿಯನ್​ ಸಿನಿದುನಿಯಾಗೆ ಕರುನಾಡೇ ಹೆಡ್​ ಆಫೀಸ್​ ಆಗಿದ್ದು, ಕನ್ನಡದ ಮಣ್ಣಿಗೆ ಕೈ ಬೀಸಿ ಕರೆದಿದೆ.

ಸೌತ್​​​​​​​​​​​ ಇಂಡಿಯನ್​​ ಇಂಟರ್​​​ನ್ಯಾಷನಲ್​ ಮೂವಿ ಅವಾರ್ಡ್ಸ್​​​ 2022 ರ ಸಮಾರಂಭಕ್ಕೆ ಸಿಲಿಕಾನ್​​ ಸಿಟಿ ಸಾಕ್ಷಿಯಾಗಿದೆ. ದುಬೈ, ಮಲೇಷಿಯಾ, ಸಿಂಗಾಪೂರ್​ಗಳಲ್ಲಿ ನಡಿತಿದ್ದ ಸೈಮಾ ಅದ್ಧೂರಿ ಸಮಾರಂಭಕ್ಕೆ ಉದ್ಯಾನ ನಗರಿ ಸಾಥ್​ ನೀಡಿದೆ. ಸೌತ್​​​​ ಸೂಪರ್​ ಸ್ಟಾರ್​ಗಳು ಪ್ರಶಸ್ತಿ ಸ್ವೀಕರಿಸೋಕೆ ಬೆಂಗಳೂರು ಅರಸಿ ಬಂದಿದ್ದಾರೆ. ಈ ಮೂಲಕ ಕನ್ನಡದ ಧ್ವಜ ವಿಶ್ವ ಮಟ್ಟದಲ್ಲಿ ಜಗಮಗಿಸ್ತಿದೆ. ಅಂತೂ ರಾಕಿಭಾಯ್​ ಆಡಿದ ಮಾತುಗಳು ಕನ್ನಡ ಸಿನಿಮಾಗಳ ಗತ್ತು ಗಾಂಭೀರ್ಯವನ್ನು ಪ್ರೂವ್​ ಮಾಡಿದಂತಿದೆ.

  • ರಾಕಿಭಾಯ್ ಘರ್ಜನೆ.. ಚಿತ್ರರಂಗದಲ್ಲಿ ಕನ್ನಡ ಕೀರ್ತಿ ಪತಾಕೆ
  • ರಾಕಿಭಾಯ್​​, ಡಾ.ಶಿವಣ್ಣ, ಡಾಲಿ ರೆಡ್​​ ಕಾರ್ಪೆಟ್​​​​ ಪೋಸ್​​

ಕನ್ನಡ, ತಮಿಳು, ತೆಲುಗು, ಮಲಯಾಳಂ ಇಂಡಸ್ಟ್ರಿಯಿಂದ ಬಣ್ಣ ಬಣ್ಣದ ಬಟ್ಟೆ ತೊಟ್ಟು ಬಂದಿದ್ದ ಸ್ಟಾರ್​ ನಟರಿಗೆ ಸೈಮಾ ರೆಡ್​​ ಕಾರ್ಪೆಟ್​​ ವೆಲ್ಕಮ್​ ನೀಡಿತ್ತು. ಸ್ಟಾರ್​ ಕಲಾವಿದರು ಕ್ಯಾಮೆರಾಗೆ ಪೋಸ್ ಕೊಟ್ರು. ಧ್ರುವ ತಾರೆ ಅಪ್ಪು ನೆನಪಲ್ಲಿ ಚಾಲನೆ ನೀಡಲಾದ ಸೈಮಾ ಅವಾರ್ಡ್​​ ಫಂಕ್ಷನ್​​ಗೆ ಸ್ಯಾಂಡಲ್​​​ವುಡ್​ ತಾರೆಯರ ಸಮಾಗಮವಿತ್ತು. ಸೆಂಚುರಿ ಸ್ಟಾರ್​​ ಶಿವಣ್ಣ ಜೋಡಿ, ಯಶ್​​- ರಾಧಿಕಾ ಜೋಡಿ, ಅಮೃತಾ ಅಯ್ಯಂಗಾರ್​​, ಟಗರು ಡಾಲಿ, ಸೇರಿ ಸ್ಯಾಂಡಲ್​ವುಡ್​​ ಸ್ಟಾರ್​ಗಳು ಮಿಂಚ್ತಾ ಇದ್ದರು.

ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​​ನಲ್ಲಿ ಸಿನಿದೀಪಾವಳಿ ಸಮಾರಂಭ ಜೋರಾಗಿತ್ತು. ಬೆಟ್ಟದ ಹೂ ಅಪ್ಪು ಅಭಿನಯದ ಯುವರತ್ನ ಚಿತ್ರಕ್ಕಾಗಿ ಬೆಸ್ಟ್​ ಆ್ಯಕ್ಟರ್​​ ಅವಾರ್ಡ್​​ ಒಲಿದು ಬಂತು. ಸಿಲಿಕಾನ್​ ಸಿಟಿಯ ಚೊಚ್ಚಲ ಸೈಮಾ ಅವಾರ್ಡ್​​ ಸಮಾರಂಭದಲ್ಲಿ ಗಣ್ಯರ ದಂಡೇ ನೆರೆದಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೆರೆದ ಪ್ರೇಕ್ಷಕರಿಗೆ ಮಸ್ತ್​ ಮನಂಜನೆಯ ರಸಪಾಕ ನೀಡಲಾಯ್ತು. ಅಂತೂ ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿದ್ದ ತೀರ್ಪುಗಾರರ ಮುಂದೆ ಸೆಡ್ಡು ಹೊಡೆದು ತವರು ನೆಲದಲ್ಲೇ ಗತ್ತು, ತಾಕತ್ತನ್ನು ಸಾಬೀತು ಮಾಡಿದ್ವು.

ಕನ್ನಡ ಸಿನಿಮಾ ಸೇರಿದಂತೆ ಟಾಲಿವುಡ್​ ಕಾಲಿವುಡ್ ಸಿನಿಮಾಗಳು ಪ್ರಶಸ್ತಿ ಬಾಚಿಕೊಂಡ್ವು. ಅಲ್ಲು ಅರ್ಜುನ್ ಕಮಲ್​ ಹಾಸನ್​​​​, ನಟಿ ಹನ್ಸಿಕಾ, ರಣವೀರ್​​​ ಸಿಂಗ್​​​ ಸೇರಿ ಸ್ಟಾರ್​ ನಿರ್ದೇಶಕರು, ಸ್ಟಾರ್​ ಸಿಂಗರ್ಸ್​​​ ಕೂಡ ಪಾಲ್ಗೊಂಡು ಸಮಾರಂಭಕ್ಕೆ ಇನ್ನಷ್ಟು ಮೆರಗು ತುಂಬಿದ್ರು. ಪುಷ್ಪ ಚಿತ್ರದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್​ ಬೆಸ್ಟ್​ ಆ್ಯಕ್ಟರ್​ ಅವಾರ್ಡ್​ ಪಡೆದ್ರು. ನಟಿ ಆಶಿಕಾ, ಚಿಕ್ಕಣ್ಣ, ಶ್ರೀಲೀಲಾ, ಅರ್ಜುನ್​ ಜನ್ಯಾ, ಪ್ರಮೋದ್​ ಸೇರಿ ಅನೇಕ ಸ್ಯಾಂಡಲವ್​ವುಡ್​ ತಾರೆಯರು ಪ್ರಶಸ್ತಿಗೆ ಭಾಜನರಾಗಿದ್ರು. ಕನ್ನಡ ಸಿನಿಮಾಗಳ ಬೆಳವಣಿಗೆಯಿಂದ ಸೈಮಾ ಉತ್ಸವಗಳು ಇಲ್ಲಿ ನಡೆಯುವಂತೆ ಆಗಿವೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES