Monday, December 23, 2024

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವಾಮಾಚಾರ

ಮೈಸೂರು :  ಮಾನಸ ಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿನ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ಪ್ರಯೋಗವಾಗಿದೆ.

ಪತ್ರಿಕೋದ್ಯಮ‌ ವಿಭಾಗದ ಕಚೇರಿಯಲ್ಲಿ ಹಿಂದಿನ ಹೆಚ್ ಓ ಡಿ ಯಾಗಿದ್ದ ತೇಜಸ್ವಿ ನವಿಲೂರು ಫೋಟೊ ಕತ್ತರಿಸಿ ಜೊತೆಗೆ ಕುಂಕುಮ, ಕೂದಲು, ಬಳೆಚೂರು, ಕೋಳಿ ತಲೆ, ಕಾಲು ಕತ್ತರಿಸಿಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಆರು ತಿಂಗಳ ಹಿಂದೆ ತೇಜಸ್ವಿ ಎಚ್ಓಡಿ ಸ್ಥಾನದಿಂದ ಬದಲಾಗಿದ್ರು, ಹೊಸ ಎಚ್ ಓ ಡಿ ಸುಪರ್ದಿಗೆ ಕೊಠಡಿಯನ್ನು ನೀಡಲಾಗಿತ್ತು.

ಇನ್ನು, ಆರು ತಿಂಗಳ ಬಳಿಕ ಕೊಠಡಿಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಸಹದ್ಯೋಗಿಗಳಿಂದಲೇ ವಾಮಾಚಾರ ಪ್ರಯೋಗವಾಗಿರುವುದಾಗಿ ಸಂಶಯ ವ್ಯಕ್ತವಾಗುತ್ತಿದೆ. ವಾಮಾಚಾರಕ್ಕೆ ಒಳಗಾದ ಅಧ್ಯಾಪಕ ತೇಜಸ್ವಿರವರು ಇದರ ವಿರುದ್ದ ದೂರು ದಾಖಲು ಮಾಡಿದ್ದಾರೆ.

RELATED ARTICLES

Related Articles

TRENDING ARTICLES