Saturday, January 18, 2025

ಮಾನ್ಸೂನ್ ರಾಗ ಸಿನಿಮಾದಲ್ಲಿ ರೋಮ್ಯಾಂಟಿಕ್ ಪಾತ್ರ ನೀಡಿದ್ದಾರೆ: ನಟಿ ಸುಹಾಸಿನಿ

ಬೆಂಗಳೂರು: ನಟ ಡಾಲಿ ಧನಂಜಯ, ನಟಿ ರಚಿತಾ ರಾಮ್ ನಟಿಸಿದ ಮಾನ್ಸೂನ್ ರಾಗ ಚಿತ್ರವು ಬರುವ ಸೆಪ್ಟೆಂಬರ್ 16ಕ್ಕೆ ರಿಲೀಸ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಾನ್ಸೂನ್ ರಾಗ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಸುಹಾಸಿನಿ ಮಣಿರತ್ನಂ, ಮಾನ್ಸೂನ್ ರಾಗ ಸಿನಿಮಾ ನನಗೆ ಪಾತ್ರ ಬಹಳ ಇಷ್ಟವಾಯ್ತು. ಇದೇ ಮೊದಲ ಬಾರಿ ನಾನು ನನ್ನ ಕಾಸ್ಟ್ಯೂಮ್ ವಿಚಾರ ಡೈರೆಕ್ಟರ್ ನಿರ್ಧಾರಕ್ಕೆ ಈ ಚಿತ್ರದಲ್ಲಿ ಬಿಟ್ಟಿದ್ದೆ, ಅಳೋದು, ಗೋಳಾಡೋ ಪಾತ್ರ ಬಿಟ್ಟು ರೊಮ್ಯಾಂಟಿಕ್ ರೋಲ್ ನನಗೆ ನೀಡಿದ್ದಾರೆ. ಸೀನಿಮಾ ಜೀವನದ ಮೊದಲ ಪ್ರೀ ರಿಲೀಸ್ ಇವೆಂಟ್ ಆಗಿದೆ. ನನ್ನನ್ನ ಇಲ್ಲಿಯವರೆಗೆ ಯಾರೂ ಪ್ರೀ ರಿಲೀಸ್ ಇವೆಂಟ್ ಗೆ ಕರೆದಿಲ್ಲ ಎಂದರು.

ಇಂತಹ ಪಾತ್ರಗಳು ಬಂದ್ರೆ ಕಂಡಿತಾ ಮತ್ತೆ ಮತ್ತೆ ಕನ್ನಡದಲ್ಲಿ ನಟಿಸುತ್ತೇನೆ. ನನ್ನ ಈ ನಗುವಿಗೆ ಸುತ್ತಲೂ ಇರುವ ಈ ಕಲಾವಿದರು, ನಟರೇ ಕಾರಣ, ಅದರಲ್ಲಿ ಮಣಿರತ್ನಂ, ಕಮಲ್ ಹಾಸನ್ ಎಲ್ಲರು ಇದ್ದಾರೆ, ನಟ ಅಚ್ಯುತ್ ಕುಮಾರ್​ ಅವರು ಅದ್ಬುತ ಕಲಾವಿದರು ಎಂದು ನನಗೆ ನಟ ರಮೇಶ್ ಅರವಿಂದ್ ಹೇಳಿದ್ದರು. ಕಲಾವಿದನಿಗೆ ಭಯ ಇದ್ದರೆ ಮಾತ್ರ ಅವ್ರು ಕಲಾವದರು ಎನಿಸಿಕೊಳ್ಳೋದು, ಈ ಸಿನಿಮಾ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣಲಿ ಎಂದು ಸುಹಾಸಿನಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಇನ್ನು ಈ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್, ಗಾಯಕ ವಾಸುಕಿ ವೈಭವ್, ನಟ ನಾಗಭೂಷಣ್, ಕೆ ಕಲ್ಯಾಣ್, ರಘು ಮುಖರ್ಜಿ, ವಸಿಷ್ಠ ಸಿಂಹ, ಯಶಾ ಶಿವಕುಮಾರ್ ಸೇರಿದಂತೆ ಇನ್ನೀತರ ಕಲಾವಿದರು ಭಾಗವಹಿಸಿದ್ದರು.

 

RELATED ARTICLES

Related Articles

TRENDING ARTICLES